ನವದೆಹಲಿ: ಇಂದು ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೂ ಡಿಜಿಟಲ್ ಪೇಮೆಂಟ್ ಸಮಸ್ಯೆಯಿಂದ ಕಂಗಾಲಾಗಿದ್ದ ಬಳಕೆದಾರರು, ಸಂಜೆ ಹೊತ್ತಿಗೆ ವಾಟ್ಸಪ್ ಸ್ಟೇಟಸ್ ಸಮಸ್ಯೆ ಅನುಭವಿಸಿದ್ದಾರೆ.
ಮೆಸೇಜಿಂಗ್ ಪ್ಲಾಟ್‌ಫಾರ್ಮ್ ವಾಟ್ಸಪ್‌ನಲ್ಲಿ ವ್ಯತ್ಯಯ ಕಂಡುಬಂದಿದ್ದು, ವಾಟ್ಸಪ್ ಸರಿಯಾಗಿ ಕೆಲಸ ಮಾಡುತ್ತಿಲ್ಲ. ಸೇವೆಯಲ್ಲಿ ವ್ಯತ್ಯಯವಾಗಿದೆ ಎಂದು ಕೆಲ ಬಳಕೆದಾರರು ದೂರು ನೀಡಿದ್ದಾರೆ.
ಇಂದು ಸಂಜೆ ಮೆಟಾ-ಮಾಲೀಕತ್ವದ ಅಪ್ಲಿಕೇಶನ್‌ನಲ್ಲಿ ತಮ್ಮ ಸ್ಟೇಟಸ್‌ಗಳನ್ನು ಅಪ್‌ಲೋಡ್ ಮಾಡಲು ಅಥವಾ ಸಂದೇಶಗಳನ್ನು ಕಳುಹಿಸಲು ಸಮಸ್ಯೆಯಾಗುತ್ತಿದೆ ಎಂದು ಬಳಕೆದಾರರು ವರದಿ ಮಾಡಿದ್ದಾರೆ.
ಇಂದು ಸಂಜೆ 5.13ರವರೆಗೆ ವಾಟ್ಸಪ್ ವಿರುದ್ಧ ಕನಿಷ್ಠ 463 ದೂರುಗಳು ದಾಖಲಾಗಿವೆ ಎಂಬ ಮಾಹಿತಿ ಲಭ್ಯವಾಗಿದೆ.
ಈ ಮೂಲಕ ಇಂದು ಡಿಜಿಟಲ್ ಪೇಮೆಂಟ್ ಹಾಗೂ ವಾಟ್ಸಪ್ ಬಳಕೆದಾರರಿಗೆ ಭಾರೀ ಸಮಸ್ಯೆ ತಂದಿಟ್ಟಿದ್ದು, ಅವರು ಅನುಭವಿಸಿದ ಸಮಸ್ಯೆಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.





