ವಾಷಿಂಗ್ಟನ್: ಕಳೆದ 2008ರಲ್ಲಿ ನಡೆದ ಮುಂಬೈ ತಾಜ್ ಹೋಟೆಲ್‌ನಲ್ಲಿ ಬ್ಲಾಸ್ಟ್ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತದ ಕಾನೂನು ಹೋರಾಟಕ್ಕೆ ಇದೀಗ ಜಯ ಸಿಕ್ಕಿದೆ.
ಪ್ರಕರಣದ ಪ್ರಮುಖ ಅಪರಾಧಿ ತಹಾವೂರ್ ರಾಣಾನನ್ನು ಭಾರತಕ್ಕೆ ಹಸ್ತಾಂತರಿಸುವಂತೆ ಅಮೇರಿಕಾ ಸುಪ್ರೀಂಕೋರ್ಟ್ ಆದೇಶ ಹೊರಡಿಸಿದೆ.
ಕಳೆದ 2008ರಲ್ಲಿ ಮುಂಬೈ ಭಯೋತ್ಪಾದಕ ದಾಳಿ ಪ್ರಕರಣದಲ್ಲಿ ಭಾರತಕ್ಕೆ ಬೇಕಾಗಿದ್ದ ಪಾಕಿಸ್ತಾನ್ ಮೂಲದ ಕೆನಡಾದ ಪ್ರಜೆ ರಾಣಾನನ್ನು ಹಸ್ತಾಂತರಿಸುವಂತೆ ಕೋರಲಾಗಿತ್ತು. ಇದೀಗ ಭಾರತಕ್ಕೆ ಗಡೀಪಾರು ಮಾಡಲು ಅಮೇರಿಕಾ ಸುಪ್ರೀಂಕೋರ್ಟ್ ಒಪ್ಪಿಗೆ ನೀಡಿದೆ.
ರಾಣಾ ಪ್ರಸ್ತುತ ಲಾಸ್ ಎಂಜಲೀಸ್‌ನ ಮೆಟ್ರೊಪಾಲಿಟನ್ ಡಿಟೆನ್ಷನ್ ಸೆಂಟರ್‌ನಲ್ಲಿ ಬಂಧಿತನಾಗಿದ್ದಾನೆ. ಕಳೆದ ತಿಂಗಳು ಕ್ಯಾಲಿಪೋರ್ನಿಯಾದ ಜಿಲ್ಲಾ ಕೇಂದ್ರ ಕೋರ್ಟ್ ಆರೋಪಿ ರಾಣಾನನ್ನು ಭಾರತಕ್ಕೆ ಹಸ್ತಾಂತರಿಸಲು ಅನುಮೋದನೆ ನೀಡಿತ್ತು.





