Mysore
27
scattered clouds

Social Media

ಭಾನುವಾರ, 07 ಡಿಸೆಂಬರ್ 2025
Light
Dark

ಮುಂದುವರೆದ ಅಮೆರಿಕ ಚೀನಾ ಸುಂಕ ಸಮರ

ವಾಷಿಂಗ್ಟನ್ : ಅಮೆರಿಕ ಹಾಗೂ ಚೀನಾದ ನಡುವೆ ಮತ್ತೆ ಸುಂಕ ಸಮರ ಮುಂದುವರಿದಿದ್ದು, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೆಚ್ಚುವರಿ ಶೇ.೧೦೦ರಷ್ಟು ಸುಂಕವನ್ನು ಘೋಷಿಸಿದ್ದಾರೆ.

ಕ್ಸಿಜಿನ್‌ಪಿಂಗ್ ಅವರೊಂದಿಗಿನ ಶೃಂಗಸಭೆಯನ್ನು ರದ್ದುಗೊಳಿಸುವುದಾಗಿ ಟ್ರಂಪ್ ತಿಳಿಸಿದ್ದಾರೆ. ಅಪರೂಪದ ಭೂಮಿಯ ಖನಿಜಗಳ ಮೇಲಿನ ರಫ್ತು ನಿರ್ಬಂಧಕ್ಕೆ ಸಂಬಂಽಸಿದಂತೆ ಚೀನಾ ಜೊತೆಗಿನ ಅಮೆರಿಕ ವ್ಯಾಪಾರ ಯುದ್ಧವನ್ನು ಮತ್ತೆ ಪ್ರಾರಂಭಿಸಿದ್ದು, ಚೀನಾ ಕೆಲವೊಂದು ಅಸಾಧಾರಣ ಕ್ರಮಗಳನ್ನು ಕೈಗೊಂಡಿದೆ. ಅದಕ್ಕೆ ಪ್ರತಿಕಾರವಾಗಿ, ಎಲ್ಲಾ ನಿರ್ಣಾಯಕ ಸಾ-ವೇರ್‌ಗಳ ಮೇಲಿನ ಹೆಚ್ಚುವರಿ ಸುಂಕಗಳು ನ.೧ರಿಂದಲೇ ಜಾರಿಗೆ ಬರಲಿವೆ. ಯುಎಸ್ ರಫ್ತು ನಿಯಂತ್ರಣಗಳು ಸಹ ಜಾರಿಗೆ ಬರಲಿವೆ ಎಂದು ಟ್ರೂತ್ ಸೋಷಿಯಲ್‌ನಲ್ಲಿ ಟ್ರಂಪ್ ಪೋಸ್ಟ್ ಮಾಡಿದ್ದಾರೆ.

ಇದಲ್ಲದೆ ಡೊನಾಲ್ಡ್ ಟ್ರಂಪ್ ಚೀನಾ ಅಧ್ಯಕ್ಷ ಕ್ಸಿಜಿನ್‌ಪಿಂಗ್ ಅವರೊಂದಿಗೆ ಮಾತುಕತೆ ಮತ್ತು ಸಭೆಗಳ ಸಾಧ್ಯತೆಯನ್ನು ತಿರಸ್ಕರಿಸಿದ್ದಾರೆ. ಚೀನಾದ ಉತ್ಪನ್ನಗಳ ಮೇಲಿನ ಶೇ.೧೦೦ರಷ್ಟು ಸುಂಕವು ನವೆಂಬರ್ ೧, ೨೦೨೫ರಿಂದ ಜಾರಿಗೆ ಬರಲಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ:-ಮುಂದುವರೆದ ಅಮೆರಿಕ ಚೀನಾ ಸುಂಕ ಸಮರ

ಟ್ರಂಪ್- ಕ್ಸಿಜಿನ್‌ಪಿಂಗ್ ಸಭೆ ಇಲ್ಲ
ಈ ತಿಂಗಳ ಕೊನೆಯಲ್ಲಿ ದಕ್ಷಿಣ ಕೊರಿಯಾದಲ್ಲಿ ನಡೆಯಲಿರುವ ಏಷ್ಯಾ-ಪೆಸಿಫಿಕ್ ಆರ್ಥಿಕ ಸಹಕಾರ ಶೃಂಗಸಭೆಯಲ್ಲಿ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರನ್ನು ಭೇಟಿ ಮಾಡುವ ಯೋಜನೆಯನ್ನು ಡೊನಾಲ್ಡ್ ಟ್ರಂಪ್ ಪ್ರಶ್ನಿಸಿದ್ದಾರೆ.
ನಾನು ಎರಡು ವಾರಗಳಲ್ಲಿ ದಕ್ಷಿಣ ಕೊರಿಯಾದಲ್ಲಿ ನಡೆಯಲಿರುವ ಎಪಿಕ್ ಅ ಶೃಂಗಸಭೆಯಲ್ಲಿ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರನ್ನು ಭೇಟಿಯಾಗಬೇಕಿತ್ತು. ಆದರೆ ಈಗ ಹಾಗೆ ಮಾಡಲು ನನಗೆ ಯಾವುದೇ ಕಾರಣ ಕಾಣುತ್ತಿಲ್ಲ ಎಂದು ಹೇಳಿದ್ದಾರೆ.

Tags:
error: Content is protected !!