ಹೊಸದಿಲ್ಲಿ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಲೋಕಸಭೆಯಲ್ಲಿ ಇಂದು(ಫೆ.1) 2025-26ನೇ ಸಾಲಿನ ಕೇಂದ್ರ ಬಜೆಟ್ ಮಂಡಿಸುತ್ತಿದ್ದು, ವೈದ್ಯಕೀಯ ಕಾಲೇಜಿಗಳಲ್ಲಿ ಸೀಟುಗಳ ಸಂಖ್ಯೆ ಶೇ.100ರಷ್ಟು ಹೆಚ್ಚಳವಾಗಲಿವೆ ಎಂದಿದ್ದಾರೆ.
ಇನ್ನೂ ಬಿಹಾರಕ್ಕೆ ಗ್ರೀನ್ ಫೀಲ್ಡ್ ವಿಮಾನ ನಿಲ್ದಾಣ ಮಂಜೂರು, ಪಟ್ನಾ ಐಐಟಿಗೆ ವಿಸ್ತರಣೆಗೆ ಅನುದಾನ, ಗಿಗ್ ಕಾರ್ಮಿಕರಿಗೆ ಆರೋಗ್ಯ ವಿಮಾ ಸೌಲಭ್ಯ ಸೇರಿದಂತೆ ಒಂದು ಕೋಟಿ ಗರ್ಭಿಣಿಯರು ಹಾಗೂ ಹಾಲುಣಿಸುವ ತಾಯಂದಿಯರಿಗೆ ವಿಶೇಷ ಯೋಜನೆ ಘೋಷಿಸಿದ್ದಾರೆ.