Mysore
21
scattered clouds

Social Media

ಶನಿವಾರ, 22 ಆಗಸ್ಟ್ 2026
Light
Dark

ಗಾಂಧಿ ಅಭಿಯಾನ ಅರಿವಿನ ಯಾನ | ಗಾಂಧೀಜಿ ಆತ್ಮಕತೆಯ ಶತಮಾನೋತ್ಸವಕ್ಕೆ ಆಂದೋಲನ ಕೈಜೋಡಿಸಿರುವುದು ಐತಿಹಾಸಿಕ

ಪ್ರೊ. ಜಿ. ಬಿ. ಶಿವರಾಜು, ಟ್ರಸ್ಟಿ, ಕಸ್ತೂರ ಬಾ ಗಾಂಧಿ ಆಶ್ರಮ

ಗಾಂಧೀಜಿ ಆತ್ಮಕತೆ ‘ಸತ್ಯದೊಡನೆ ನನ್ನ ಅನ್ವೇಷಣೆ’ಗೆ ೧೦೦ ವರ್ಷಗಳು ಸಂದಿರುವ ಶತಮಾನೋತ್ಸವ ಸಂದರ್ಭದಲ್ಲಿ ಅವರ ವ್ಯಕ್ತಿ ವಿಚಾರಗಳನ್ನು ನಾಡಿನಾದ್ಯಂತ ಜನಮಾನಸದಲ್ಲಿ ವಿಶೇಷವಾಗಿ ಯುವಜನರಲ್ಲಿ ಬಿತ್ತುವ ಕಾರ್ಯಯೋಜನೆಯಲ್ಲಿ ಗಾಂಧು ಭವನದ ಜತೆ ಕೈಜೋಡಿಸಿರುವ ಮೈಸೂರಿನ ‘ಆಂದೋಲನ’ ದಿನ ಪತ್ರಿಕೆ ಕಾರ್ಯ ಶ್ಲಾಘನೀಯ.

ನೊಬೆಲ್ ಪ್ರಶಸ್ತಿ ವಿಜೇತ ರೊಮ್ಯಾನ್ ರೋಲ್ಯಾಂಡ್ ಬರೆದ ಗಾಂಧೀಜಿ ಜೀವನ ಚರಿತ್ರೆಯಿಂದ ಪ್ರಭಾವಿತರಾಗಿ ತಕ್ಷಣವೇ ಭಾರತಕ್ಕೆ ಬಂದು ಗಾಂಧೀಜಿ ಕೊನೆಯ ಉಸಿರು ಇರುವವರೆಗೂ ಇದ್ದು ಅವರಿಂದ ‘ಮೀರಾ ಬೆನ್’ ಎಂದು ನಾಮಾಂಕಿತಗೊಂಡ ಇಂಗ್ಲೆಂಡಿನ ಮೆಡಲಿನಾ ಸ್ಲೇಡ್ ಅವರ ಈ ಕೆಳಕಂಡ ಮಾತು ಒಂದು ಜೀವನ ಚರಿತ್ರೆ ಏನು ಪರಿವರ್ತನೆ ತರಬಲ್ಲದು ಎಂಬುದನ್ನು ಸಹ ನಾವು ಯುವ ಮನಸ್ಸುಗಳಿಗೆ ಸಮರೋಪಾದಿಯಲ್ಲಿ ಬಿತ್ತಬೇಕಿದೆ.

“ಈಜಿಪ್ಟ್ ಪ್ರವಾಸ ಮುಗಿಸಿ ಹಿಂತಿರುಗಿದಾಗ ಪ್ಯಾರಿಸ್ಸಿನ ಪುಸ್ತಕ ಭಂಡಾರದ ಕಿಟಕಿಯ ತುಂಬಾ ಕಿತ್ತಳೆ ಬಣ್ಣದ ಸಣ್ಣ ಪುಸ್ತಕದ ಪ್ರತಿಗಳು ಎದ್ದು ಕಾಣುತ್ತಿದ್ದವು. ರೊಮ್ಯಾನ್ ರೋಲ್ಯಾಂಡ್ ಅವರು ಬರೆದ ‘ಮಹಾತ್ಮ ಗಾಂಧಿ’ ಎಂಬ ಕೃತಿಯನ್ನು ಕೂಡಲೇ ಕೊಂಡು ಓದತೊಡಗಿದೆ. ಊಟದ ಸಮಯದಲ್ಲಿ ಅದನ್ನು ಬಿಡಲಾಗದೆ ಓದಿ ಮುಗಿಸಿದೆ. ನನ್ನ ಅಂತರಾಳದ ತುಮುಲಗಳಿಗೆಲ್ಲಾ ಉತ್ತರ ಸಿಕ್ಕಿದಂತೆ ಭಾಸವಾಯಿತು. ಭಾರತದಲ್ಲಿ ದಲಿತರಾದಿಯಾಗಿ ಜನಕೋಟಿಯ ವಿಮೋಚನೆಗಾಗಿ ಸತ್ಯ ಮತ್ತು ಅಹಿಂಸೆಗಳನ್ನು ಅಂಗೀಕರಿಸಿ ಹೋರಾಡುತ್ತಿದ್ದ ಗಾಂಽ ಅವರ ಸಂದೇಶ ಇಡೀ ಮಾನವ ಲೋಕದ ಮುಕ್ತಿಗಾಗಿ ಎನಿಸಿತು. ಕೂಡಲೇ ಭಾರತಕ್ಕೆ ಹೊರಡುವ ಸಂಕಲ್ಪ ಮಾಡಿಬಿಟ್ಟೆ”.

“ಸಬರಮತಿ ಆಶ್ರಮದ ಒಳಗೆ ಹೋಗುತ್ತಿದ್ದ ಹಾಗೆಯೇ ಒಂದು ಕಂದು ಬಣ್ಣದ ವ್ಯಕ್ತಿ ನನ್ನೆಡೆಗೆ ಬಂದಿತು. ಆತನನ್ನು ನೋಡಿದಾಗ ನನಗೆ ಒಂದು ಜ್ಯೋತಿಯನ್ನು ಕಂಡಂತೆ ಆಯಿತು. ಅವನೆದುರಿಗೆ ಮಂಡಿಯೂರಿದೆ, ಕೈಗಳು ಸ್ನೇಹದಿಂದ ನನ್ನತ್ತ ಚಾಚಿದವು. ಒಂದು ಧ್ವನಿ ಹೇಳಿತು, ನೀನು ನನ್ನ ಮಗಳಾಗಿರುವೆ ಎಂದು”.

“ಕಾರ್ಯಾರ್ಥವಾಗಿ ಇಂಗ್ಲೆಂಡಿಗೆ ಬಂದೆ, ಇಲ್ಲದಿದ್ದರೆ ಬರುತ್ತಿರಲಿಲ್ಲ. ಇಲ್ಲಿಗೆ ಬಂದದ್ದು ನನಗೆ ಯಾವುದೋ ಪರದೇಶಕ್ಕೆ ಬಂದ ಹಾಗಿದೆ. ನನ್ನ ಜೀವ ಹಿಂದೂಸ್ಥಾನದಲ್ಲೇ ಇದೆ. ಎಂದಿಗೂ ಅಲ್ಲೇ ಇದ್ದೀತು”. (ದುಂಡು ಮೇಜಿನ ಪರಿಷತ್‌ನಲ್ಲಿ ಭಾಗವಹಿಸಲು ಭಾರತದಿಂದ ಇಂಗ್ಲೆಂಡಿಗೆ ಹಿಂತಿರುಗಿದಾಗ).

“ಗಾಂಧಿ ಜತೆ ಇಂಗ್ಲೆಂಡಿಗೆ ದುಂಡು ಮೇಜಿನ ಪರಿಷತ್ತಿಗೆ ಬಂದಾಗ ನನಗಿದ್ದವರು ಇಬ್ಬರೇ; ಬಾಪು ಮತ್ತು ಭಗವಂತ. ಈಗ ಅವರಿಬ್ಬರೂ ಒಂದಾಗಿಬಿಟ್ಟಿದ್ದಾರೆ”(ಗಾಂಧೀಜಿ ನಿಧನರಾದಾಗ ಮೀರಾ ಬೆನ್ ನುಡಿದದ್ದು). ನಿಮ್ಮೊಡನೆ:

“ಭಾರತದಲ್ಲಿರುವ ಕವಿಗಳು, ವಿಚಾರವಂತರು ಮತ್ತು ಜನಾದರಣೆಯ ನೇತಾರರಿಗೆ ಸರಿಸಮಾನರಾದ ಅಥವಾ ಹೋಲಿಸಬಹುದಾದಂತಹವರನ್ನು ಯೂರೋಪಿನಲ್ಲಾಗಲಿ ಅಥವಾ ಅಮೆರಿಕದಲ್ಲಾಗಲಿ ನಾನಿನ್ನೂ ನೋಡಿಯೇ ಇಲ್ಲ”.

“ಗಾಂಧೀಜಿ ಮತ್ತೊಬ್ಬ ಏಸು”. -ರೊಮ್ಯಾನ್ ರೋಲ್ಯಾಂಡ್ (ನೊಬೆಲ್ ಪ್ರಶಸ್ತಿ ಪುರಸ್ಕೃತರು). “ಗಾಂಧೀಜಿ ಅವರಂತಹ ಮಹಾನ್ ವ್ಯಕ್ತಿಯನ್ನು ಪಡೆದ ಭಾರತೀಯರೇ ಪುಣ್ಯವಂತರು”. -ಜೆ. ಸಿ. ಸ್ಮಟ್ಸ್(ದಕ್ಷಿಣ ಆಫ್ರಿಕಾದಲ್ಲಿ ಗಾಂಧೀಜಿ ಅವರನ್ನು ಜೈಲಿನಲ್ಲಿಟ್ಟಿದ್ದ ಬ್ರಿಟೀಷ್ ಅಧಿಕಾರಿ). “ಗಾಂಧೀಜಿ ಜಗತ್ತಿಗೆ ಅನಿವಾರ್ಯ, ಮರೆತರೆ ವಿಶ್ವದ ನಾಶ”. -ಮಾರ್ಟಿನ್ ಲೂಥರ್ ಕಿಂಗ್(ಅಮೆರಿಕದ ಆ- ಅಮೆರಿಕನ್ ಜನರ ನಾಯಕ). “ಗಾಂಧೀಜಿ ಕುಳಿತಲ್ಲಿ ದೇವಮಂದಿರವಾಯಿತು. ನಡೆದಲ್ಲಿ ಪವಿತ್ರ ಭೂಮಿಯಾಯಿತು”. -ಪಂಡಿತ ಜವಹರಲಾಲ್ ನೆಹರು(ಭಾರತದ ಪ್ರಥಮ ಪ್ರಧಾನಿ). ವಿಶ್ವದ ಗಣ್ಯರು ಹೇಳಿದ ಈ ಮಾತುಗಳು ನಮ್ಮ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ವ್ಯಕ್ತಿತ್ವದ ಹಿರಿಮೆ-ಗರಿಮೆಯನ್ನು ಸಾರುತ್ತವೆ. ಇಂದಿನ ಯುವ ಪೀಳಿಗೆಯು ಆಧುನಿಕ ಯುಗದಲ್ಲಿ ದ್ವಂದ್ವದಲ್ಲಿದ್ದಾರೆ, ಹತಾಶರಾಗಿದ್ದಾರೆ. ಅಸಹಿಷ್ಣುತೆಯ ಕಾರ್ಮೋಡ ಅವರನ್ನು ಸುತ್ತುವರಿದಿದೆ. ವಾಸ್ತವವಾಗಿ ಜೀವನದ ಉದ್ದೇಶದ ಬಗ್ಗೆ ಯುವಜನರಲ್ಲಿ ಅರಿವು ಮೂಡಿಸುವುದರಲ್ಲಿ ನಾವು ಬಹುಪಾಲು ವಿ-ಲರಾಗಿದ್ದೇವೆ ಅನಿಸುತ್ತಿದೆ. ಸಮಾಜದ ಪ್ರತಿಯೊಬ್ಬರಲ್ಲಿಯೂ ಒಬ್ಬ ಬುದ್ಧ, ಬಸವೇಶ್ವರ, ವಿವೇಕಾನಂದ, ಗಾಂಧೀ, ಡಾ. ಅಂಬೇಡ್ಕರ್ ಮೊದಲಾದ ದಾರ್ಶನಿಕರು ಇದ್ದೇ ಇರುತ್ತಾರೆ. ಆದರೆ, ಅವರು ನಮ್ಮ ಬದುಕಿಗೆ ನೀಡಿರುವ ಜೀವನದ ಮೌಲ್ಯಗಳನ್ನು ಕಡೆಗಣಿಸಿ, ತಿರಸ್ಕರಿಸಿ ಆಧುನಿಕ ಆಕರ್ಷಣೆಗೆ ಯುವ ಜನತೆ ಬಲಿಯಾಗುತ್ತಿರುವುದು ವಿಪರ್ಯಾಸದ ಸಂಗತಿ. ಯುವಜನತೆ ಈ ಮಹಾಮಹಿಮರನ್ನು ಹೆಚ್ಚೆಚ್ಚು ಓದಿಕೊಳ್ಳಬೇಕು. ಆಗ ಮಾತ್ರ ಜೀವನಕ್ಕೆ ಬಹು ಅಮೂಲ್ಯವಾದ ಪಾಠಗಳು ಸಿಗುತ್ತವೆ.

ಯುವಜನತೆ ಹತಾಶೆಯಿಂದ ಹೊರಬರಲು, ಮೌಲ್ಯಯುತ ಜೀವನಕ್ಕೆ ಹಾಗೂ ಅವರ ಜೀವನದಲ್ಲಿ ಸಕಾರಾತ್ಮಕ ಭಾವನೆ ಮೂಡುವುದಕ್ಕೆ ಗಾಂಽಜಿ ವಿಚಾರ ನಮಗೆಲ್ಲ ಪರಿಹಾರ. ಗಾಂಧೀಜಿ ಜಗತ್ತಿನ ಒಂದು ಮಹೋನ್ನತ ಆದರ್ಶದ ಸಂಕೇತವಾಗಿದ್ದಾರೆ. ಯಂತ್ರಯುಗದ ಭರಾಟೆಯಲ್ಲಿ ನಾವು ನೆಮ್ಮದಿ ಮತ್ತು ಶಾಂತಿಯಿಂದಿರಲು ಗಾಂಧೀಜಿ ಅವರ ಬದುಕು ಮತ್ತು ಚಿಂತನೆಗಳು ಹಿಂದೆಂದಿಗಿಂತಲೂ ಇಂದು ಅತ್ಯಂತ ಪ್ರಸ್ತುತ ಮತ್ತು ಅನಿವಾರ್ಯ. ಬಸವಳಿದು ಕ್ಷೀಣಿಸುತ್ತಿರುವ ಮಾನವನ ಮನಸ್ಸನ್ನು ಪುನಶ್ಚೇತನಗೊಳಿಸುವ ಮತ್ತು ಸನ್ಮಾರ್ಗದಲ್ಲಿ ಕೊಂಡೊಯ್ಯುವ ದಿಸೆಯಲ್ಲಿ ಅವರ ವ್ಯಕ್ತಿತ್ವ ಆಧುನಿಕ ಜಗತ್ತಿಗೆ ದಾರಿದೀಪ. ನಾಯಕತ್ವದ ಜತೆಗೆ ಪ್ರಾಮಾಣಿಕ ಬದುಕಿನ ಸುಖವನ್ನು ತೋರಿಸಿಕೊಟ್ಟು, ಸರಳ ಬದುಕನ್ನು ಜೀವನದ ಪಥವನ್ನಾಗಿಸಿಕೊಂಡು, ಸಮಷ್ಟಿಯಲ್ಲಿ ತನ್ನ ಸಂತೋಷವನ್ನು ಕಂಡುಕೊಂಡು ಜೀವನದ ಸಾರ್ಥಕತೆಯನ್ನು ಮೆರೆದವರು ಮಹಾತ್ಮ ಗಾಂಧೀಜಿ. ನಾಲಗೆಯನ್ನು ನಂಬಿ ನಡೆದ ನಾಯಕ. ಆಡಿದ ಮಾತಿಗೂ ನಡೆದ ಬದುಕಿಗೂ ಅಂತರವಿಲ್ಲದೆ ಬದುಕಿನ ನೇತಾರ ಎಂದು ಗಣ್ಯರು ಸ್ಮರಿಸಿದ್ದಾರೆ.

ಗಣ್ಯರು ನೀಡಿರುವ ಅಭಿಪ್ರಾಯಗಳಿಂದ ಗಾಂಧೀಜಿ ಅವರ ವ್ಯಕ್ತಿತ್ವದ ಹಿರಿಮೆ ನಮಗೆ ತಿಳಿಯುತ್ತದೆ. ಇದರ ಪ್ರಕಾರ ಇಂದಿನ ಜಗತ್ತಿನ ಎಲ್ಲ ಜಟಿಲ ಸಮಸ್ಯೆಗಳಿಗೆ ಗಾಂಽಜಿ ಅವರ ವಿಚಾರಗಳಲ್ಲಿ ಪರಿಹಾರವಿದೆ. ಈ ಕಾರಣದಿಂದಲೇ ನಮ್ಮ ರಾಷ್ಟ್ರಪಿತನನ್ನು ನಾವೆಲ್ಲಾ ತಿಳಿದು ಬದುಕುವುದೇ ನಿಜವಾದ ಸಾರ್ಥಕ ಜೀವನವೆನ್ನಬಹುದು. ನಾವು ಹೊಸದಾಗಿ ಯಾವ ಸಾಹಿತ್ಯ ವಿಚಾರಗಳನ್ನು ಗಾಂಽಜಿ ಅವರ ಬಗ್ಗೆ ಸೃಷ್ಟಿಸುವ ಅಗತ್ಯವಿಲ್ಲ. ಪ್ರಸ್ತುತ ನಮ್ಮಲ್ಲಿ ಲಭ್ಯವಿರುವ ಈ ಅಂಶಗಳನ್ನು ಪರಿಣಾಮಕಾರಿಯಾಗಿ ತಲುಪಿಸುವ ಕಾರ್ಯ ತ್ವರಿತವಾಗಿ, ಆಂದೋಲನದೋಪಾದಿಯಲ್ಲಿ ಆಗಬೇಕಿದೆ.

ಗಾಂಧೀಜಿ ಹಚ್ಚಿರುವ ಜ್ಯೋತಿಯನ್ನು ಆರಿಹೋಗದಂತೆ ನೋಡಿಕೊಳ್ಳುವುದು ಎಲ್ಲರ ಕರ್ತವ್ಯವಾಗಿದೆ. ಗಣ್ಯರೊಬ್ಬರು ಹೇಳಿದಂತೆ “ಗಾಂಧೀಜಿ ತತ್ವಗಳು ಕತ್ತಲಿನ ಸಮಾಜಕ್ಕೆ ದೀವಟಿಗೆ. ಅವರ ಸತ್ಯ, ಅಹಿಂಸೆ, ಸ್ವದೇಶಿ ತತ್ವಗಳು ಬದುಕಿನ ದಾರಿ ಹಸನುಗೊಳಿಸಲು ನೇಗಿಲಿದ್ದಂತೆ”. ಗಾಂಧೀಜಿ ತಿಳಿಯುವ ಆಸಕ್ತಿ

 

Tags:
error: Content is protected !!