ಹೊಸದಿಲ್ಲಿ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಲೋಕಸಭೆಯಲ್ಲಿ 2025-26ನೇ ಸಾಲಿನ ಕೇಂದ್ರ ಬಜೆಟ್ ಮಂಡಿಸುತ್ತಿದ್ದಾರೆ.
ಹಣಕಾಸು ಸಚಿವರ ಬಜೆಟ್ ಭಾಷಣದ ಮುಖ್ಯಾಂಶಗಳು
- ಜಲ್ ಜೀವನ್ ಮಿಷನ್‌ನ ಬಜೆಟ್ ಔಟ್‌ಲೆಟ್ ಅನ್ನು 100% ಕವರೇಜ್ ಸಾಧಿಸಲು ಹೆಚ್ಚಿಸಲಾಗಿದೆ. ಹೊಸ ಯೋಜನೆಗಳಲ್ಲಿ ರೂ 10 ಲಕ್ಷ ಕೋಟಿ
- ಬಂಡವಾಳವನ್ನು ತುಂಬಲು ಆಸ್ತಿ ಹಣಗಳಿಸುವ ಯೋಜನೆ 2025-30 ಅನ್ನು ಪ್ರಾರಂಭಿಸಲಾಗುವುದು.
- ಹೆಚ್ಚುವರಿ 40,000 ಯೂನಿಟ್ ಕೈಗೆಟುಕುವ ದರದಲ್ಲಿ 2025ರಲ್ಲಿ ಪೂರ್ಣಗೊಳ್ಳಲಿದೆ.
- ವಿದ್ಯುತ್ ವಿತರಣೆ ಮತ್ತು ಪ್ರಸರಣ ಕಂಪನಿಗಳನ್ನು ಬಲಪಡಿಸಲಾಗುವುದು
- ಪ್ರವಾಸೋದ್ಯಮ ಹೆಚ್ಚಿಸಲು ಬುದ್ಧ ಸರ್ಕ್ಯೂಟ್‌ಗೆ ಒತ್ತು.
- ಬೋಧಗಯಾವನ್ನು ಅಭಿವೃದ್ಧಿಪಡಿಸಲಾಗುವುದು.
- ಇದರೊಂದಿಗೆ ಬಿಹಾರದಲ್ಲಿ ಹೊಸ ಕಾಲುವೆ ಯೋಜನೆಗೆ ಅನುಮೋದನೆ ನೀಡಲಾಯಿತು.
- ಕ್ಯಾನ್ಸರ್, ಅಪರೂಪದ ಖಾಯಿಲೆಗಳಿಗೆ ಸಂಬಂಧಿಸಿದಂತೆ 30 ಔಷಧಗಳಿಗೆ ಅಮದು ಮೇಲಿನ ಅಬಕಾರಿ ಸುಂಕದಿಂದ ರಿಯಾಯಿತಿ
ಕೃತಕ ಬುದ್ಧಿಮತ್ತೆ ಕ್ಷೇತ್ರದಲ್ಲಿ ಮೂರು ನಾವಿನ್ಯತೆ ಸಂಸ್ಥೆಗಳ ಸ್ಥಾಪನೆ 23 ಐಐಟಿಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿ ಸಂಖ್ಯೆ ಹೆಚ್ಚಿಸಲಾಗಿದೆ. 60 ಸಾವಿರದಿಂದ 1.2 ಲಕ್ಷಕ್ಕೆ ಹೆಚ್ಚಳ. ಪಟ್ನಾ ಐಐಟಿ ವಿಸ್ತರಣೆ, ವೈದ್ಯಕೀಯ ಕಾಲೇಜುಗಳ ಸೀಟುಗಳನ್ನು ಶೇ 100ರಷ್ಟು ಹೆಚ್ಚಳ ಮಾಡಲಾಗುವುದು.
ಮೇಕ್ ಇನ್ ಇಂಡಿಯಾ ಯೋಜನೆಯಡಿಯಲ್ಲಿ ರಾಷ್ಟ್ರೀಯ ತಯಾರಿಕಾ ವಲಯವನ್ನು ರಚಿಸಲಾಗುವುದು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಹಯೋಗದಲ್ಲಿ ಇದನ್ನು ಜಾರಿಗೊಳಿಸಲಾಗುವುದು. ಸೌರ, ಇವಿ ಬ್ಯಾಟರಿ, ಮೋಟಾರ್‌ಗಳು ಸೇರಿದಂತೆ ವಿವಿಧ ಉತ್ಪನ್ನಗಳ ತಯಾರಿಕೆ ಹಾಗೂ ಹೂಡಿಕೆಯನ್ನು ಉತ್ತೇಜಿಸಲಾಗುವುದು.
ಉದ್ಯಮ ಕ್ಷೇತ್ರದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಮಹಿಳೆಯರನ್ನು ಉತ್ತೇಜಿಸುವ ಸಲುವಾಗಿ ಹೊಸ ಯೋಜನೆ ಜಾರಿಗೊಳಿಸಲಾಗುವುದು. 22 ಲಕ್ಷ ಉದ್ದಿಮೆದಾರರಿಗೆ ಅನುಕೂಲವಾಗಲಿದೆ. ಚರ್ಮೋದ್ಯವನ್ನು ಉತ್ತೇಜಿಸಿ ರಫ್ತು ಹೆಚ್ಚಿಸುವ ಗಮನ ಹರಿಸಲಾಗುವುದು. ಆ ಮೂಲಕ ಮೇಡ್ ಇನ್ ಇಂಡಿಯಾ ಬ್ರಾಂಡ್ ಉತ್ತೇಜಿಸಲಾಗುವುದು