ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಂದು 2025-26ನೇ ಸಾಲಿನ ಕೇಂದ್ರ ಬಜೆಟ್‌ನ್ನು ಮಂಡಿಸಿದರು.
ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ ಸತತ 8ನೇ ಬಜೆಟ್ ಇದಾಗಿದ್ದು, 75 ನಿಮಿಷಗಳಲ್ಲಿ ಮುಕ್ತಾಯಗೊಂಡಿದೆ.
ಕಳೆದ 2020ರಲ್ಲಿ 2 ಗಂಟೆ 40 ನಿಮಿಷ ಬಜೆಟ್ ಮಂಡಿಸಿ ದೀರ್ಘ ಬಜೆಟ್ ಎಂಬ ದಾಖಲೆ ಬರೆದಿದ್ದ ನಿರ್ಮಲಾ ಸೀತಾರಾಮನ್ ಅವರಿಗೆ ಇದು ಎರಡನೇ ಕಿರು ಬಿಜೆಟ್ ಆಗಿದೆ.
ಕಳೆದ ಬಜೆಟ್ ಮಂಡನೆಗಳ ಸಮಯ:
ನಿರ್ಮಲಾ ಸೀತಾರಾಮನ್ ಅವರು, 2019ರಲ್ಲಿ 2 ಗಂಟೆ 17 ನಿಮಿಷ, 2021ರಲ್ಲಿ 1 ಗಂಟೆ 50 ನಿಮಿಷ, 2022ರಲ್ಲಿ 1 ಗಂಟೆ 32 ನಿಮಿಷ ಹಾಗೂ 2023ರಲ್ಲಿ 1 ಗಂಟೆ 27 ನಿಮಿಷದಲ್ಲಿ ಬಜೆಟ್ ಮಂಡಿಸಿದ್ದರು.
ಇನ್ನು 2024ರಲ್ಲಿ ಮಂಡಿಸಿದ್ದ ಮಧ್ಯಂತರ ಬಜೆಟ್ ಕೇವಲ 56 ನಿಮಿಷಗಳಲ್ಲೇ ಕೊನೆಗೊಂಡಿತ್ತು. ಹಾಗಾಗಿ ಈ ಬಾರಿಯ ಬಜೆಟ್ ಅವರ ಪಾಲಿಗೆ ಎರಡನೇ ಕಡಿಮೆ ಅವಧಿಯ ಬಜೆಟ್ ಎನಿಸಿದೆ.