ಡೆಹ್ರಾಡೂನ್: ಮದುವೆ, ವಿಚ್ಚೇದನ, ಉತ್ತರಾಧಿಕಾರ ಮತ್ತು ಆಸ್ತಿ ಹಕ್ಕು ವಿಚಾರ ಸೇರಿದಂತೆ ಎಲ್ಲಾ ಧರ್ಮಿಯರಿಗೂ ಒಂದೇ ಕಾನೂನು ಜಾರಿಗೆ ಅವಕಾಶ ಮಾಡಿಕೊಡುವ ಏಕರೂಪ ನಾಗರಿಕ ಸಂಹಿತೆ ಉತ್ತರಾಖಂಡದಲ್ಲಿ ಇಂದಿನಿಂದ ಜಾರಿಗೆ ಬಂದಿದೆ.
ಸಿಎಂ ಪುಷ್ಕರ್ ಸಿಂಗ್ ಧಾಮಿ ನೇತೃತ್ವದ ಬಿಜೆಪಿ ಸರ್ಕಾರ ಕಾಯಿದೆಯನ್ನು ಜಾರಿಗೆ ತಂದಿದೆ.
ಯುಸಿಸಿ ಅಡಿಯಲ್ಲಿ ಯಾರೇ ಮದುವೆಯಾದರೂ 60 ದಿನಗಳಲ್ಲಿ ನೋಂದಣಿ ಮಾಡಿಕೊಳ್ಳಬೇಕು. ಮದುವೆ ಅವರವರ ಸಂಪ್ರದಾಯ, ಧರ್ಮಕ್ಕೆ ಅನುಸಾರವಾಗಿ ಮಾಡಬಹುದು. ಆದರೆ ನೋಂದಣಿ ಕಡ್ಡಾಯವಾಗಿದೆ. ಈ ಮೂಲಕ ಎಲ್ಲಾ ಮದುವೆಗಳಿಗೆ ಕಾನೂನಾತ್ಮಕ ರಕ್ಷಣೆ ಸಿಗಲಿದೆ.
ಸರ್ಕಾರದ ಈ ನಿರ್ಧಾರವನ್ನು ಸಿಎಂ ಪುಷ್ಕರ್ ಸಿಂಗ್ ಧಾಮಿ ಸಮರ್ಥಿಸಿದ್ದು, ಏಕರೂಪ ನಾಗರಿಕ ಸಂಹಿತೆಯು ಧರ್ಮ, ಲಿಂಗ, ಜಾತಿ ಅಥವಾ ಸಮುದಾಯದ ಭೇದ ಇಲ್ಲದ ಸಾಮರಸ್ಯದ ಸಮಾಜಕ್ಕೆ ಅಡಿಪಾಯ ಹಾಕುತ್ತದೆ ಎಂದು ಹೇಳಿದ್ದಾರೆ.
ಯುಸಿಸಿ ನಿಯಮಗಳ ಮುಖ್ಯ ಅಂಶಗಳು:
1) ಬಹುಪತ್ನಿತ್ವ ಹಾಗೂ ಬಹುಪತಿತ್ವ ನಿಷೇಧ
2) 60 ದಿನಗಳ ಒಳಗೆ ವಿವಾಹ ನೋಂದಣಿ ಕಡ್ಡಾಯ
3) ಬಾಲಕಿಯರಿಗೂ ಆಸ್ತಿಯಲ್ಲಿ ಗಂಡು ಮಕ್ಕಳಷ್ಟೇ ಸಮಾನ ಪಾಲು
4) ಮಸ್ಲಿಂ ಮಹಿಳೆಯರಿಗೆ ದತ್ತು ಪಡೆಯುವ ಸಮಾನ ಪಾಲು
5) ಮುಸ್ಲಿಂ ಸಮುದಾಯದ ಎಲ್ಲಾ ಹಲಾಲ್ ಹಾಗೂ ಇದ್ಧತ್ ನಿಷೇಧ