ಕ್ವಾಲಾಲಂಪುರ: ಐಸಿಸಿ 19 ವರ್ಷದೊಳಗಿನ ಮಹಿಳಾ ಟಿ-20 ವಿಶ್ವಕಪ್ ಟೂರ್ನಿಯಲ್ಲಿ ಸತತ 2ನೇ ಬಾರಿಗೆ ದಕ್ಷಿಣ ಆಫಿಕ್ರಾದ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ ಟೀಂ ಇಂಡಿಯಾ ಚಾಂಪಿಯನ್ ಪಟ್ಟ ಅಲಂಕರಿಸಿದೆ.
ಹಾಲಿ ಚಾಂಪಿಯನ್ ಆಗಿರುವ ಇಂಡಿಯಾ ತಂಡವೂ ಇಂದು(ಫೆಬ್ರವರಿ.2) ನಡೆದ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 9 ವಿಕೆಟ್ ಅಂತರದಲ್ಲಿ ಭರ್ಜರಿ ಗೆಲುವು ಸಾಧಿಸಿದೆ.
ಈ ಪಂದ್ಯದಲ್ಲಿ ಇಂಡಿಯಾ ತಂಡವೂ 83 ರನ್‌ಗಳ ಗೆಲುವಿನ ಗುರಿ ಬೆನ್ನಟ್ಟಿದ್ದು, 11.2 ಓವರ್‌ಗಳಲ್ಲಿ ಒಂದು ವಿಕೆಟ್ ನಷ್ಟಕ್ಕೆ ಗುರಿ ತಲುಪಿತು. ಈ ಮೂಲಕ ದಕ್ಷಿಣ ಆಫ್ರಿಕಾವನ್ನು ಮಣಿಸಿ ಸತತ 2ನೇ ಬಾರಿಗೆ ಟಿ-20 ವಿಶ್ವಕಪ್ ಅನ್ನು ಗೆದ್ದುಬೀಗಿದೆ.
ಟೀಂ ಇಂಡಿಯಾವನ್ನು ಕರ್ನಾಟಕದ ಆಟಗಾರ್ತಿ ನಿಕಿ ಪ್ರಸಾದ್ ಮುನ್ನಡೆಸಿದ್ದರು. ಇದೀಗ ಸ್ಮರಣೀಯ ಟ್ರೋಫಿ ಗೆಲುವಲ್ಲಿ ಯಶಸ್ವಿಯಾಗಿದ್ದಾರೆ.
ಇಂದು ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ದಕ್ಷಿಣ ಆಫ್ರಿಕಾ ತಂಡ 20 ಓವರ್‌ಗಳಲ್ಲಿ 82 ರನ್‌ಗಳಿಗೆ ತನ್ನೆಲ್ಲಾ ವಿಕೆಟ್‌ಗಳನ್ನು ಪತನ ಮಾಡಿಕೊಂಡಿತು.
ಈ ರನ್‌ಗಳನ್ನು ಟೀಂ ಇಂಡಿಯಾ ಬೆನ್ನಟ್ಟಿದ್ದು, ಪ್ರಾರಂಭದಲ್ಲೇ ಜಿ.ಕಮಲಿನಿ(9) ವಿಕೆಟ್‌ನ್ನು ಕಳೆದುಕೊಂಡಿತು. ಆದರೆ ಸನಿಕ ಚಾಲ್ಕೆ ಜೊತೆ ಸೇರಿಕೊಂಡ ತೃಷಾ ತಂಡವನ್ನು ಗೆಲುವಿನ ದಡ ಸೇರಿದರು.
ಇನ್ನೂ ಬ್ಯಾಟಿಂಗ್‌ನಲ್ಲೂ ಮಿಂಚಿದ ತೃಷಾ 33 ಎಸೆತಗಳಲ್ಲಿ 44 ರನ್(8 ಬೌಂಡರಿ)ಗಳಿಸಿ ಅಜೇಯವಾಗಿ ಉಳಿದರು. ಅವರಿಗೆ ತಕ್ಕ ಸಾಥ್ ನೀಡಿದ ಸನಿಕ ಚಾಲ್ಕೆ ಔಟಾಗದೇ 26 ರನ್‌ಗಳನ್ನು ಗಳಿಸಿದರು.
U-19 ಮಹಿಳಾ T-20 ವಿಶ್ವಕಪ್‌ನ ಒಂದು ಪಂದ್ಯದಲ್ಲೂ ಸೋಲು ಕಾಣದೇ ಟೀಂ ಇಂಡಿಯಾ ಜಯ ಸಾಧಿಸಿದ್ದರೆ, ಮತ್ತೊಂದೆಡೆ ದಕ್ಷಿಣ ಆಫ್ರಿಕಾ ಇದೇ ಮೊದಲ ಬಾರಿಗೆ ಫೈನಲ್ ಪ್ರವೇಶಿಸಿತ್ತು.