Mysore
23
broken clouds

Social Media

ಶುಕ್ರವಾರ, 13 ಜೂನ್ 2025
Light
Dark

ಬಿಯರ್‌ ಸೇವಿಸಿ ಇಬ್ಬರು ಕಾನ್‌ಸ್ಟೆಬಲ್‌ ಸಾವು

ಮಧ್ಯಪ್ರದೇಶ: ಇಲ್ಲಿನ ಛಿಂದ್ವಾರ ಜಿಲ್ಲೆಯ ವಿಶೇಷ ಸಶಸ್ತ್ರ ಪಡೆಯ(ಎಸ್‌ಎಎಫ್)‌ ಇಬ್ಬರು ಸಿಬ್ಬಂದಿ ಬಿಯರ್‌ ಸೇವೆನೆಯಿಂದ ಮೃತಪಟ್ಟಿದ್ದಾರೆ ಎಂದು ಪೋಲಿಸರು ತಿಳಿಸಿದ್ದಾರೆ.

ಎಸ್‌ಎಎಫ್‌ನ ೮ನೇ ಬೆಟಾಲಿಯನ್‌ ಪೊಲೀಸ್‌ ಸಿಬ್ಬಂದಿಗಳಾದ ದಾನಿರಾಮ್ ಉಯ್ಕೆ(೫೫), ಪ್ರೇಮಲಾಲ್‌ ಕಕೋಡಿಯಾ (೫೦) ಎಂಬುವವರೇ ಮೃತರು.

ದಾನಿರಾಮ್‌ ಹಾಗೂ ಪ್ರೇಮಲಾಲ್‌ ಇಬ್ಬರು ಒಟ್ಟಿಗೆ ಶನಿವಾರ(ಮೇ.25) ರಾತ್ರಿ ಬಿಯರ್‌ ಸೇವನೆ ಮಾಡಿದ್ದರು. ಸ್ಪಲ್ಪ ಸಮಯದ ಬಳಿಕ ವಾಂತಿ ಮಾಡಿಕೊಂಡಿದ್ದು, ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಆಸ್ಪತ್ರೆಗೆ ಕರೆತರುವಷ್ಟರಲ್ಲಿಯೇ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿರುವುದಾಗಿ ಪೊಲೀಸ್‌ ಅಧಿಕಾರಿ ಉಮೇಶ್‌ ಗೋಲ್ಹಾನಿ ಹೇಳಿದ್ದಾರೆ.

ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದು, ಮರಣೋತ್ತರ ಪರೀಕ್ಷೆ ವರದಿ ಬಂದ ನಂತರ ಸಾವಿಗೆ ನಿಖರ ಕಾರಣ ತಿಳಿಯಲಿದೆ ಎಂದು ಅವರು ತಿಳಿಸಿದ್ದಾರೆ.

Tags:
error: Content is protected !!