ವಾಷಿಂಗ್ಟನ್: ಇಸ್ರೆಲ್-ಹಮಾಸ್ ನಡುವಿನ ಕದನದಲ್ಲಿ ಹಿಡಿದಿಟ್ಟಿರುವ ಒತ್ತೆಯಾಳಗಳನ್ನು ಬಿಡದಿದ್ದರೆ ಯುದ್ದ ಪುನರಾರಂಭಿಸಬೆಕು ಎಂದು ಅಮೇರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಸುಮಾರು ಒಂದೂವರೆ ವರ್ಷಗಳ ನಿರಂತರ ಯುದ್ಧದಿಂದ ಇಸ್ರೆಲ್ ಹಾಗೂ ಹಮಾಸ್ ಮಧ್ಯೆ ಕದನ ವಿರಾಮ ಒಪ್ಪಂದ ಏರ್ಪಟ್ಟಿತ್ತು.
ವಾರದ ಹಿಂದೆ ಇಸ್ರೆಲ್ ಕದನ ವಿರಾಮ ಉಲ್ಲಂಘಿಸಿದೆ ಎಂದು ಹಮಾಸ್, ಗಾಜಾ ಪಟ್ಟಿಯಲ್ಲಿನ ಒತ್ತೆಯಾಳುಗಳನ್ನು ಬಿಡುಗಡೆ ಮಾಡಲು ವಿಳಂಬ ಮಾಡಿದೆ.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಟ್ರಂಪ್, ಎಲ್ಲ ಒತ್ತೆಯಾಳುಗಳನ್ನು ವಾರದೊಳಗೆ ಬಿಡುಗಡೆ ಮಾಡಬೇಕು ಇಲ್ಲದಿದ್ದರೆ ಯುದ್ಧ ಮತ್ತೆ ಆರಂಭಿಸಬೇಕು ಎಂದು ಹೇಳಿದ್ದಾರೆ.
ನಾನು ನನ್ನ ನಿರ್ಧಾರವನ್ನು ಹೇಳಿದ್ದೇನೆ. ಅಂತಮ ನಿರ್ಧಾರ ಇಸ್ರೆಲ್‌ಗೆ ಬಿಟ್ಟಿದ್ದು ಎಂದಿದ್ದಾರೆ.