Mysore
28
few clouds

Social Media

ಶನಿವಾರ, 24 ಜನವರಿ 2026
Light
Dark

ಟ್ರಂಪ್‌ ಕಸರತ್ತು ವ್ಯರ್ಥ ; ಮರಿಯಾ ಕೊರಿನಾ ಮಚಾದೊಗೆ ಒಲಿದ ನೊಬೆಲ್‌ ಶಾಂತಿ ಪ್ರಶಸ್ತಿ..

ನ್ಯೂಯಾರ್ಕ್‌ : ನೊಬೆಲ್ ಪ್ರಶಸ್ತಿ ಮೇಲೆ ಕಣ್ಣಿಟ್ಟಿದ್ದ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಭಾರೀ ನಿರಾಸೆ ಉಂಟಾಗಿದೆ. ಈ ಬಾರಿಯ(2025ರ) ನೊಬೆಲ್ ಶಾಂತಿ ಪ್ರಶಸ್ತಿಯು ದಿಟ್ಟ ಹೋರಾಟಗಾರ್ತಿ, ಕೈಗಾರಿಕಾ ಎಂಜಿನಿಯರ್‌ ಮತ್ತು ರಾಜಕಾರಣಿ ಮರಿಯಾ ಕೊರಿನಾ ಮಚಾದೊಗೆ ಒಲಿದಿದೆ.

ವೆನೆಜುವೆಲಾದ ಜನರಿಗೆ ಪ್ರಜಾಪ್ರಭುತ್ವ ಹಕ್ಕುಗಳನ್ನು ಕಲ್ಪಿಸಲು ಅವಿಶ್ರಮವಾಗಿ ಶ್ರಮಿಸಿ ಮತ್ತು ದೇಶದಲ್ಲಿ ಸರ್ವಾಧಿಕಾರವನ್ನು ಹೋಗಲಾಡಿಸಿ ಪ್ರಜಾಪ್ರಭುತ್ವದ ನ್ಯಾಯಯುತ ಮತ್ತು ಶಾಂತಿಯುತ ಪರಿವರ್ತನೆಯನ್ನು ಸಾಧಿಸಲು ಮಾಡಿದ ಹೋರಾಟಕ್ಕಾಗಿ ಮರಿಯಾ ಕೊರಿನಾ ಮಚಾದೊ ಅವರಿಗೆ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ನೀಡಲು ನೊಬೆಲ್ ಸಮಿತಿ ನಿರ್ಧರಿಸಿದೆ.

ಈ ಘೋಷಣೆಯೊಂದಿಗೆ ಕಳೆದ ಕೆಲವು ದಿನಗಳಿಂದ ನೊಬೆಲ್ ಪ್ರಶಸ್ತಿ ಸ್ಪರ್ಧೆಯಲ್ಲಿ ತನ್ನ ಪರ ಹಕ್ಕು ಚಲಾಯಿಸುತ್ತಿದ್ದ ಸ್ವಘೋಷಿತ ಶಾಂತಿದೂತ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಕಾಣುತ್ತಿದ್ದ ನೊಬೆಲ್ ಪ್ರಶಸ್ತಿ ಗೆಲ್ಲುವ ಕನಸು ಭಗ್ನಗೊಂಡಂತಾಗಿದೆ.

ಇದನ್ನು ಓದಿ : ಐವರು ಸಾಧಕರಿಗೆ ಮಹರ್ಷಿ ವಾಲ್ಮೀಕಿ ಪ್ರಶಸ್ತಿ ಪ್ರಕಟ

ನೊಬೆಲ್ ಶಾಂತಿ ಪ್ರಶಸ್ತಿ ವಿಜೇತೆ ಮಾರಿಯಾ ಕೊರಿನಾ ಮಚಾದೊ ಅವರು ಕಳೆದ ವರ್ಷದಿಂದ ತಲೆಮರೆಸಿಕೊಳ್ಳುವಂತೆ ಒತ್ತಾಯಿಸಲ್ಪಟ್ಟಿದ್ದರೂ ತಮ್ಮ ಹೋರಾಟವನ್ನು ಮುಂದುವರೆಸಿದ್ದರು. ಅವರ ಜೀವಕ್ಕೆ ಗಂಭೀರ ಬೆದರಿಕೆಗಳಿದ್ದರೂ, ಅವರು ದೇಶದಲ್ಲೇ ಇದ್ದರು. ಅವರ ಆಯ್ಕೆಯು ಲಕ್ಷಾಂತರ ಜನರಿಗೆ ಸ್ಫೂರ್ತಿ ನೀಡುತ್ತದೆ ಎಂದು ನೊಬೆಲ್ ಸಮಿತಿ ತಿಳಿಸಿದೆ.

ಧೈರ್ಯ ಮತ್ತು ದೃಢನಿಶ್ಚಯದ ಸಂಕೇತ
ಸರ್ವಾಧಿಕಾರಿ ಶಕ್ತಿಗಳು ಅಧಿಕಾರವನ್ನು ವಶಪಡಿಸಿಕೊಂಡಾಗ, ಎದ್ದು ನಿಂತು ವಿರೋಧಿಸುವ ಸ್ವಾತಂತ್ರ್ಯದ ಧೈರ್ಯಶಾಲಿ ರಕ್ಷಕರನ್ನು ಗುರುತಿಸುವುದು ಮುಖ್ಯ ಎಂದು ಹೇಳುವ ಮೂಲಕ ನೊಬೆಲ್ ಸಮಿತಿಯು ಮರಿಯಾ ಕೊರಿನಾ ಮಚಾದೊ ಅವರ ಧೈರ್ಯವನ್ನು ಶ್ಲಾಘಿಸಿದೆ. ಮೌನವಾಗಿರಲು ನಿರಾಕರಿಸುವವರ ಮೇಲೆ, ಗಂಭೀರ ಅಪಾಯಗಳ ಹೊರತಾಗಿಯೂ ಮುಂದೆ ಹೆಜ್ಜೆ ಹಾಕುವ ಧೈರ್ಯ ಮಾಡುವವರ ಮೇಲೆ ಮತ್ತು ಸ್ವಾತಂತ್ರ್ಯವನ್ನು ಎಂದಿಗೂ ಲಘುವಾಗಿ ಪರಿಗಣಿಸಬಾರದು, ಆದರೆ ಯಾವಾಗಲೂ ಮಾತು, ಧೈರ್ಯ ಮತ್ತು ದೃಢಸಂಕಲ್ಪದಿಂದ ರಕ್ಷಿಸಿಕೊಳ್ಳಬೇಕು ಎಂದು ನಮಗೆ ನೆನಪಿಸುವವರ ಮೇಲೆ ಪ್ರಜಾಪ್ರಭುತ್ವ ಅವಲಂಬಿತವಾಗಿದೆ’ ಎಂದು ಸಮಿತಿ ಹೇಳಿದೆ.

Tags:
error: Content is protected !!