ನವದೆಹಲಿ: ತುಮಕೂರು ಜಿಲ್ಲೆಗೆ ರೈಲ್ವೆ 2 ಕೆಳ ಸೇತುವೆ, 1 ಮೇಲ್ಸೇತುವೆ ನಿರ್ಮಾಣ ಕಾಮಗಾರಿಗೆ ಕೇಂದ್ರ ರೈಲ್ವೆ ಸಚಿವಾಲಯ ಮಂಜೂರು ಮಾಡಿದೆ ಎಂದು ಕೇಂದ್ರ ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ.
ಈ ಬಗ್ಗೆ ನವದೆಹಲಿಯಲ್ಲಿ ಮಾತನಾಡಿದ ಅವರು, ಈ ಮೂರು ಸೇತುವೆಗಳು ಒಟ್ಟು 60 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿದೆ. ಕಲ್ಲಿಪಾಳ್ಯ ರೋಡ್, ಬೆಂಚಗೆರೆ ಗೇಟ್ ಹಾಗೂ ಬಂಡಿಹಳ್ಳಿ ರೋಡ್ ಗೇಟ್ ನಿರ್ಮಾಣವಾಗಲಿದೆ.
ಈ ಹಿಂದೆ 5 ಮೇಲ್ಸೇತುವೆ ಕಾಮಗಾರಿ ನಿರ್ಮಾಣಕ್ಕೆ ಅನುಮೋದನೆ ನೀಡಲಾಗಿತ್ತು. ತುಮಕೂರು ನಗರದಲ್ಲಿ 3, ನಗರದ ಹೊರವಲಯದ ಹರಿಯೂರು ಬಳಿ ಒಂದು, ಗುಬ್ಬಿ ತಾಲ್ಲೂಕಿನ ನಿಟ್ಟೂರು ರೈಲ್ವೆ ಸ್ಟೇಷನ್ ಬಳಿ ಒಂದು ಸೇರಿ ಒಟ್ಟು 5 ರೈಲ್ವೆ ಮೇಲ್ಸೇತುವೆಗಳನ್ನು ನಿರ್ಮಿಸಲು 350 ಕೋಟಿ ವೆಚ್ಚದಲ್ಲಿ ನಿರ್ಮಿಸಲು ಆದೇಶ ನೀಡಿತ್ತು.