Mysore
20
scattered clouds

Social Media

ಸೋಮವಾರ, 26 ಜನವರಿ 2026
Light
Dark

ಮುಂಬೈಗೆ ಬೆದರಿಕೆ ಕರೆ | 400ಕೆಜಿRDX, 34 ಮಾನವ ಬಾಂಬ್‌ ಸ್ಪೋಟ..? ; ಎಲ್ಲೆಡೆ ಕಟ್ಟೆಚ್ಚರ!

bomb

ಮುಂಬೈ : ವಾಣಿಜ್ಯ ರಾಜಧಾನಿ ಮುಂಬೈ ನಗರವನ್ನೇ ಸಂಪೂರ್ಣವಾಗಿ ಸ್ಫೋಟಿಸಲು 400 ಕೆಜಿ ಆರ್‍ಡಿಎಕ್ಸ್‌ ಹೊತ್ತ 34 ಮಾನವ ಬಾಂಬ್‍ಗಳನ್ನು ವಾಹನದಲ್ಲಿ ಇಡಲಾಗಿದೆ ಎಂದು ಬೆದರಿಕೆ ಕರೆ ಬಂದಿದೆ. ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚೆತ್ತುಕೊಂಡಿರುವ ಪೊಲೀಸರು ಇಡೀ ಮುಂಬೈ ನಗರದಲ್ಲಿ ಹೈ ಅಲರ್ಟ್ ಘೋಷಿಸಿದ್ದಾರೆ.

ನಗರಕ್ಕೆ ಬರುವ ಮತ್ತು ಒಳಪ್ರವೇಶ ಮಾಡುವ ವಾಹನಗಳನ್ನು ಬಿಗಿ ತಪಾಸಣೆ ನಡೆಸಲಾಗುತ್ತಿದ್ದು, ಮುಖ್ಯವಾಗಿ ವಿಧಾನಸೌಧ, ರಾಜಭವನ, ಹೈಕೋರ್ಟ್, ಬಂದರು, ವಿಮಾನ ನಿಲ್ದಾಣ ಸೇರಿದಂತೆ ಪ್ರಮುಖ ಸರ್ಕಾರಿ ಕಟ್ಟಡಗಳು, ಖಾಸಗಿ ಕಟ್ಟಡಗಳು, ಐಟಿಬಿಟಿ ಕಚೇರಿ ಮತ್ತಿತರ ಕಡೆ ಭಾರೀ ಭದ್ರತೆಯನ್ನು ಒದಗಿಸಿದ್ದಾರೆ.

ಇಡೀ ನಗರವನ್ನು ಸ್ಫೋಟಿಸಲು 400 ಕೆಜಿ ಆರ್‍ಡಿಎಕ್ಸ್‌ ಹೊತ್ತ 34 ಮಾನವ ಬಾಂಬ್‍ಗಳನ್ನು 34 ವಾಹನಗಳಲ್ಲಿ ಇರಿಸಲಾಗಿದೆ ಎಂದು ಅನಾಮಧೇಯ ವ್ಯಕ್ತಿಯೊಬ್ಬ ಕರೆ ಮಾಡಿ ಬೆದರಿಕೆ ಹಾಕಿರುವುದು ತಲ್ಲಣ ಸೃಷ್ಟಿಸಿದೆ. ಮುಂಬೈನ ಸಂಚಾರ ಪೊಲೀಸರಿಗೆ ಅವರ ಅಧಿಕೃತ ವಾಟ್ಸಾಪ್ ಸಂಖ್ಯೆಯ ಮೂಲಕ ಬೆದರಿಕೆಗಳು ಬಂದಿವೆ. ನಗರದಾದ್ಯಂತ 34 ವಾಹನಗಳಲ್ಲಿ 34 ಮಾನವ ಬಾಂಬ್‍ಗಳನ್ನು ಇರಿಸಲಾಗಿದೆ ಮತ್ತು ಸ್ಫೋಟವು ಇಡೀ ಮುಂಬೈಯನ್ನು ನಡುಗಿಸುತ್ತದೆ ಎಂದು ಬೆದರಿಕೆಯಲ್ಲಿ ಹೇಳಲಾಗಿದೆ.

ಲಷ್ಕರ್-ಎ-ಜಿಹಾದಿ ಎಂದು ಹೇಳಿಕೊಳ್ಳುವ ಸಂಘಟನೆಯು 14 ಪಾಕಿಸ್ತಾನಿ ಭಯೋತ್ಪಾದಕರು ಭಾರತವನ್ನು ಪ್ರವೇಶಿಸಿದ್ದಾರೆ. ಸ್ಫೋಟದಲ್ಲಿ 400 ಕೆಜಿ ಆರ್‍ಡಿಎಕ್ಸ್ ಬಳಸಲಾಗುವುದು ಎಂದು ಬೆದರಿಕೆ ಸಂದೇಶದಲ್ಲಿ ಹೇಳಲಾಗಿದೆ. ಈ ಹಿನ್ನೆಲೆಯಲ್ಲಿ ಮುಂಬೈ ಪೊಲೀಸರು ಜಾಗರೂಕರಾಗಿದ್ದು, ರಾಜ್ಯಾದ್ಯಂತ ಭದ್ರತೆ ಹೆಚ್ಚಿಸಲಾಗಿದೆ. ಬೆದರಿಕೆಯ ಎಲ್ಲಾ ಕೋನಗಳನ್ನು ತನಿಖೆ ಮಾಡಲಾಗುತ್ತಿದೆ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ.

Tags:
error: Content is protected !!