ಹೊಸದಿಲ್ಲಿ : ಕೆಂಪು ಕೋಟೆ ಆವರಣದಲ್ಲಿ ನಡೆದಿದ್ದ ಒಂದು ಕೋಟಿ ರೂಪಾಯಿ ಮೌಲ್ಯದ ಎರಡು ಕಲಶಗಳ ಕಳ್ಳತನ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ.
ದೆಹಲಿಯ ಅಪರಾಧ ವಿಭಾಗದ ತಂಡ ಭಾನುವಾರ ತಡರಾತ್ರಿ ಹಾಪುರ್ ಗ್ರಾಮದ ವೈಶಾಲಿ ಕಾಲೋನಿಯಲ್ಲಿ ಆರೋಪಿ ಭೂಷಣ್ ವರ್ಮಾನನ್ನು ಎಂಬಾತನನ್ನು ಬಂಧಿಸಿ, ಚಿನ್ನದ ಕಲಶಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಆರೋಪಿ ಭೂಷಣ್ ದೆಹಲಿಯಲ್ಲಿ ಉದ್ಯಮಿಯೊಬ್ಬರಿಗೆ ಚಾಲಕನಾಗಿ ಕೆಲಸ ಮಾಡುತ್ತಿದ್ದ ಎಂದು ತಿಳಿದುಬಂದಿದೆ.
ಪೊಲೀಸರು ಬಂಧಿತ ಆರೋಪಿಯನ್ನು ದೆಹಲಿಗೆ ಕರೆತಂದಿದ್ದಾರೆ. ಆರೋಪಿ ಹೇಗೆ ಕಲಶ ಕದ್ದ, ಕಳ್ಳತನಕ್ಕೆ ಯಾರು ಸಹಾಯ ಮಾಡಿದರು, ಕಳ್ಳತನದ ನಂತರ ಆರೋಪಿ ಹಾಪುರಕ್ಕೆ ಹೇಗೆ ಹೋದ ಮತ್ತು ಕಲಶ ಕದ್ದ ನಂತರ ಅವನ ಯೋಜನೆ ಏನಾಗಿತ್ತು ಎಂಬ ಬಗ್ಗೆ ಪೊಲೀಸರು ಆರೋಪಿಯಿಂದ ಮಾಹಿತಿ ಕಲೆ ಹಾಕುತ್ತಿದ್ದಾರೆ.
ಭಾನುವಾರ ರಾತ್ರಿ ದೆಹಲಿ ಪೊಲೀಸರ ಮಾಹಿತಿಯ ಮೇರೆಗೆ ಥಾಣಾ ದೇಹತ್ ಪ್ರದೇಶದ ವೈಶಾಲಿ ಕಾಲೋನಿಯ ನಿವಾಸಿ ಭೂಷಣ್ ಎಂಬಾತನನ್ನು ಬಂಧಿಸಲಾಗಿದೆ. ಅವರ ಬಳಿಯಿಂದ ಒಂದು ಹೂದಾನಿಯನ್ನೂ ಕೂಡ ವಶಪಡಿಸಿಕೊಳ್ಳಲಾಗಿದೆ ಎಂದು ನಗರದ ಸಿಒ ವರುಣ್ ಮಿಶ್ರಾ ತಿಳಿಸಿದ್ದಾರೆ.





