Mysore
29
few clouds

Social Media

ಮಂಗಳವಾರ, 09 ಡಿಸೆಂಬರ್ 2025
Light
Dark

ಪತನಗೊಂಡಿದ್ದ ಏರ್ ಇಂಡಿಯಾ ವಿಮಾನದಲ್ಲಿ ಯಾವುದೇ ದೋಷ ಇರಲಿಲ್ಲ: ಏರ್‌ ಇಂಡಿಯಾ ಸಿಇಓ ಸ್ಪಷ್ಟನೆ

air india flight crash

ನವದೆಹಲಿ: ಕಳೆದ ತಿಂಗಳು ಸಂಭವಿಸಿದ ಏರ್‌ ಇಂಡಿಯಾ ವಿಮಾನ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಮಾನದಲ್ಲಿ ಯಾವುದೇ ದೋಷ ಕಂಡುಬಂದಿಲ್ಲ ಎಂದು ಏರ್‌ ಇಂಡಿಯಾ ಸಿಇಓ ಕ್ಯಾಂಪ್‌ ಬೆಲ್‌ ವಿಲ್ಸನ್‌ ಹೇಳಿದ್ದಾರೆ.

ಏರ್‌ ಇಂಡಿಯಾ ಉದ್ಯೋಗಿಗಳನ್ನು ಆಯ್ಕೆ ಮಾಡಲು ಸೂಚಿಸಲಾದ ಸಂವಹನದಲ್ಲಿ ವಿಲ್ಸನ್‌, ಎಲ್ಲಾ ಕಡ್ಡಾಯ ನಿರ್ವಹಣಾ ಕಾರ್ಯಗಳು ಪೂರ್ಣಗೊಂಡಿವೆ. ಇಂಧನದ ಗುಣಮಟ್ಟದಲ್ಲಿ ಯಾವುದೇ ಸಮಸ್ಯೆ ಇರಲಿಲ್ಲ. ಅಪಘಾತಕ್ಕೀಡಾದ ಏರ್‌ ಇಂಡಿಯಾ ವಿಮಾನದಲ್ಲಿ ಯಾವುದೇ ದೋಷ ಇರಲಿಲ್ಲ ಮತ್ತು ಟೇಕಾಫ್‌ ರೋಲ್‌ನಲ್ಲಿ ಯಾವುದೇ ಅಸಹಜತೆ ಇರಲಿಲ್ಲ ಎಂದು ಹೇಳಿದ್ದಾರೆ.

ಪ್ರಾಥಮಿಕ ವರದಿಯಲ್ಲಿ ವಿಮಾನ ಅಥವಾ ಎಂಜಿನ್‌ಗಳಲ್ಲಿ ಯಾವುದೇ ಯಾಂತ್ರಿಕ ಅಥವಾ ನಿರ್ವಹಣಾ ಸಮಸ್ಯೆಗಳು ಕಂಡುಬಂದಿಲ್ಲ. ಎಲ್ಲಾ ಕಡ್ಡಾಯ ನಿರ್ವಹಣಾ ಕಾರ್ಯಗಳು ಪೂರ್ಣಗೊಂಡಿವೆ ಎಂದು ಜುಲೈ.12ರಂದು ಸಾರ್ವಜನಿಕವಾಗಿ ಬಿಡುಗಡೆಯಾದ ಆರಂಭಿಕ ವರದಿಗೆ ಪ್ರತಿಕ್ರಿಯಿಸುತ್ತಾ ಹೇಳಿದ್ದಾರೆ.

ಜೂನ್.‌12ರಂದು ಅಹಮಾದಾಬಾದ್‌ನಿಂದ ಲಂಡನ್‌ ಗ್ಯಾಟ್ವಿಕ್‌ಗೆ ಹೋಗುತ್ತಿದ್ದ ಫ್ಲೈಟ್‌ A1 171 ಅಪಘಾತದಲ್ಲಿ, ವಿಮಾನದ ಟೇಕ್‌ ಆಫ್‌ ಆದ ಸ್ವಲ್ಪ ಸಮಯದ ನಂತರ ಕಟ್ಟಡಕ್ಕೆ ಡಿಕ್ಕಿ ಹೊಡೆದು 260 ಜನರು ಸಾವನ್ನಪ್ಪಿದ್ದರು. AAIB ಶನಿವಾರ ತನ್ನ ಪ್ರಾಥಮಿಕ ಸಂಶೋಧನೆಗಳನ್ನು ಬಿಡುಗಡೆ ಮಾಡಿದೆ.

Tags:
error: Content is protected !!