ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿ ಗಡಿಗೆ ಹೊಂದಿಕೊಂಡಿರುವ ಫರೀದಾಬಾದ್‍ನಲ್ಲಿ ಪೊಲೀಸರು ವಶಪಡಿಸಿಕೊಂಡಿರುವ ಸ್ಫೋಟಕ ವಸ್ತುಗಳು, ದೇಶದ ವಿವಿಧೆಡೆ ವಿಧ್ವಂಸಕ ಕೃತ್ಯಕ್ಕೆ ಬಳಸಲು ಉಗ್ರರು ಸಂಚು ರೂಪಿಸಿದ್ದರು ಎಂಬುದು ಗೊತ್ತಾಗಿದೆ.
ಫರೀದಾಬಾದ್‍ನಲ್ಲಿ ನಡೆದ ದಾಳಿ ತಡೆ ಕಾರ್ಯಾಚರಣೆಯಲ್ಲಿ ಪೊಲೀಸರು ಹಾಗೂ ತನಿಖಾ ಸಂಸ್ಥೆಗಳು ಸುಮಾರು 2,900 ಕಿಲೋಗ್ರಾಂ ಸ್ಫೋಟಕ ಸಾಮಗ್ರಿ ಮತ್ತು ಆಧುನಿಕ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿವೆ. ತನಿಖೆಯಿಂದ ಈ ವಸ್ತುಗಳು ರಾಷ್ಟ್ರದ ಹೃದಯ ಭಾಗದಲ್ಲೇ ಬೃಹತ್ ದಾಳಿ ನಡೆಸುವ ಉದ್ದೇಶದ ಭಾಗವಾಗಿದ್ದವು ಎಂಬುದು ಸ್ಪಷ್ಟವಾಗಿದೆ.
ಈ ಸಂಚು ಒಬ್ಬ ವೈದ್ಯರ ನಿವಾಸದಿಂದ ನೇರವಾಗಿ ಸಂಪರ್ಕ ಹೊಂದಿತ್ತು. ಶಿಕ್ಷಣ ಪಡೆದ ವ್ಯಕ್ತಿಗಳು ಉಗ್ರ ಚಟುವಟಿಕೆಯಲ್ಲಿ ತೊಡಗಿರುವುದು ತನಿಖಾ ಸಂಸ್ಥೆಗಳಿಗೆ ಹೊಸ ಸವಾಲು. ಅಧಿಕಾರಿಗಳ ಪ್ರಕಾರ, ಇದು ಹೊಸ ಮಾದರಿಯ ಉಗ್ರ ಚಟುವಟಿಕೆ ವೈಟ್ ಕಾಲರ್ ಜಿಹಾದ್ ಆಗಿದೆ.
ಹಾಗಾಗಿ ಫರೀದಾಬಾದ್ ಕೇವಲ ಕಾಕತಾಳೀಯ ಘಟನೆಯಲ್ಲ. ಇದು ಪೂರ್ವನಿಯೋಜಿತ ಭಯೋತ್ಪಾದಕ ಕೃತ್ಯ. ವೈದ್ಯರ ನಿವಾಸದಿಂದ 2,900 ಕಿಲೋ ಗ್ರಾಂನಷ್ಟು ಸ್ಫೋಟಕ, ಶಸ್ತ್ರಾಸ್ತ್ರಗಳು ಪತ್ತೆಯಾಗಿತ್ತು.





