ನವದೆಹಲಿ: ಶಾಸಕ ಅಬ್ಬಾಸ್ ಅನ್ಸಾ ವಿರುದ್ಧ ಗೂಂಡಾ ಕಾಯ್ದೆಯಡಿ ದಾಖಲಾದ ಪ್ರಕರಣದ ತನಿಖೆಯನ್ನು 10 ದಿನಗಳಲ್ಲಿ ಕೊನೆಗೊಳಿಸುವಂತೆ ಉತ್ತರ ಪ್ರದೇಶದ ಪೊಲೀಸರಿಗೆ ಸುಪ್ರೀಂಕೋರ್ಟ್ ಆದೇಶ ನೀಡಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು(ಫೆಬ್ರವರಿ.21) ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್‌ನ ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಎನ್.ಕೋಟಿಶ್ವರ್ ಸಿಂಗ್ ಅವರಿದ್ದ ನ್ಯಾಯಪೀಠವೂ ಅನ್ಸಾರಿ ಅವರ ವಿರುದ್ಧ ಪ್ರಕರಣದ ತನಿಖೆ ಪೂರ್ಣಗೊಂಡ ನಂತರ ಅವರ ಜಾಮೀನು ಅರ್ಜಿಯನ್ನು ವಿಚಾರಣೆಗೆ ಪರಿಗಣಿಸಲಾಗುವುದು ಎಂದು ಹೇಳಿದೆ.
ಏನಿದು ಪ್ರಕರಣ?
ಅನ್ಸಾರಿ ಹಾಗೂ ಇತರ ಕೆಲವು ಜನರು ಗ್ಯಾಂಗ್ ರಚಿಸಿದ್ದಾರೆಂದು ಆರೋಪಿಸಲಾಗಿದ್ದು, ಈ ವಿಚಾರವಾಗಿ 2024ರ ಆಗಸ್ಟ್ 31 ರಂದು ಚಿತ್ರಕೂಟ ಜಿಲ್ಲೆಯ ಕೊತ್ವಾಲಿ ಕಾರ್ವಿ ಪೊಲೀಸ್ ಠಾಣೆಯಲ್ಲಿ ದರೋಡೆಕೋರರು ಹಾಗೂ ಸಮಾಜ ವಿರೋಧಿ ಚಟುವಟಿಕೆಗಳ ಕಾಯ್ದೆಯಡಿ 1986ರ ಸೆಕ್ಷನ್ 2 ಮತ್ತು 3 ಅಡಿಯಲ್ಲಿ ಅನ್ಸಾರಿ, ಸಚನ್, ನವನೀತ್, ನಿಯಾಜ್ ಅನ್ಸಾರಿ, ಶಹಬಾಜ್ ಆಲಂ ಖಾನ್ ಹಾಗೂ ಫರಾಜ್ ಖಾನ್ ಎಂಬುವವರ ವಿರುದ್ಧ ಎಫ್‌ಐಆರ್ ದಾಖಲಿಸಲಾಗತ್ತು. ಅಲ್ಲದೇ ಇವರುಗಳ ವಿರುದ್ಧ ಸುಲ್ಲಿಗೆ ಮತ್ತು ಹಲ್ಲೆ ಆರೋಪವನ್ನು ಹೊರಿಸಲಾಗಿತ್ತು.
ಇನ್ನು ಈ ವಿಚಾರಕ್ಕೆ ಸಂಬಂಧಿಸಿದಂತೆ 2024ರ ಸೆಪ್ಟೆಂಬರ್ 6 ರಂದು ಅನ್ಸಾರಿ ಅವರನ್ನು ಬಂಧಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಜಾಮೀನು ಕೋರಿ ಅನ್ಸಾರಿ ಅವರು ಸಲ್ಲಿಸಲಾದ ಅರ್ಜಿಯನ್ನು ಡಿಸೆಂಬರ್. 18 ರಂದು ಅಲಹಾಬಾದ್ ಹೈಕೋರ್ಟ್ ವಜಾಗೊಳಿಸಿತ್ತು. ಹೀಗಾಗಿ ಈ ಬಗ್ಗೆಯೂ ಕೂಡ ತನಿಕೇ ನಡೆಯುತ್ತಿದೆ ಎಂದು ಕೋರ್ಟ್ ತಿಳಿಸಿತ್ತು.