Mysore
20
broken clouds

Social Media

ಶನಿವಾರ, 06 ಡಿಸೆಂಬರ್ 2025
Light
Dark

ಕಾಲ್ತುಳಿತ | ‌ ನಟ ವಿಜಯ್ ತಪ್ಪಿಲ್ಲ, ಡಿಎಂಕೆ ಸರ್ಕಾರ ದೂಷಿಸಿದೆ ಬಿಜೆಪಿ ; ಪರಿಹಾರ ಘೋಷಣೆ

ಕರೂರು : ತಮಿಳುನಾಡಿನ ಕರೂರಿನಲ್ಲಿ ಶನಿವಾರ ಸಂಜೆ ಸಂಭವಿಸಿದ ಕಾಲ್ತುಳಿತ ಘಟನೆಯಲ್ಲಿ ನಟ ವಿಜಯ್ ಅವರದ್ದು ತಪ್ಪೇನಿಲ್ಲಾ ಎಂದಿರುವ ಬಿಜೆಪಿ, ರಾಜ್ಯದ ಡಿಎಂಕೆ ಸರ್ಕಾರವನ್ನು ದೂಷಿಸಿದೆ.

ಭಾನುವಾರ ಕರೂರಿಗೆ ಆಗಮಿಸಿ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳ ಆರೋಗ್ಯ ವಿಚಾರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರಾಜ್ಯ ಬಿಜೆಪಿ ನಾಯಕ ಕೆ.ಅಣ್ಣಾಮಲೈ, ಮೃತರ ಕುಟುಂಬಗಳಿಗೆ ತಲಾ ರೂ. 1 ಲಕ್ಷ ಪರಿಹಾರ ಘೋಷಿಸಿದರು. ಘಟನೆಯ ಬಗ್ಗೆ ಸಿಬಿಐ ತನಿಖೆಗೆ ಒತ್ತಾಯಿಸಿದರು.

ಇದನ್ನೂ ಓದಿ :-ಬೀದರ್‌ | ಮಳೆಯಿಂದ ಭಾರೀ ಹಾನಿ ; ವಿಶೇಷ ಪ್ಯಾಕೇಜ್ ಈಶ್ವರ ಖಂಡ್ರೆ ಮನವಿ

ಕಾಲ್ತುಳಿತ ದುರಂತಕ್ಕೆ ವಿಜಯ್ ಅವರದ್ದು ತಪ್ಪೇನಿಲ್ಲಾ, ಹೆಚ್ಚಿನ ಜನ ಸೇರುವುದನ್ನು ನಿರೀಕ್ಷಿಸಿ ರಾಜ್ಯ ಪೊಲೀಸರು ಮತ್ತು ಗುಪ್ತಚರ ಇಲಾಖೆ ಸಮರ್ಪಕವಾಗಿ ಪೋಲೀಸರನ್ನು ನಿಯೋಜಿಸಬೇಕಾಗಿತ್ತು. ಪೊಲೀಸರು ಯಾಕೆ 7 ಗಂಟೆ ಅನುಮತಿ ನೀಡಬೇಕಾಯಿತು? ಎರಡು ಗಂಟೆ ನೀಡಿದ್ದರೆ ಸಾಕಾಗಿತ್ತು ಎಂದು ಟೀಕಾ ಪ್ರಹಾರ ನಡೆಸಿದರು.

ತಮಿಳುನಾಡು ಬಿಜೆಪಿಯಾಗಿ ದುರಂತ ಕುರಿತು ಸಿಬಿಐ ತನಿಖೆಗೆ ಒತ್ತಾಯಿಸುತ್ತೇವೆ. ಮಾಜಿ ನ್ಯಾಯಾಧೀಶರ ನೇತೃತ್ವದ ತನಿಖಾ ಆಯೋಗದಿಂದ ತನಿಖೆ ನಡೆಸಲು ಮುಖ್ಯಮಂತ್ರಿ ಬಯಸಿದ್ದಾರೆ. ಇದರಿಂದ ಹೇಗೆ ನ್ಯಾಯಯುತ ತನಿಖೆ ನಡೆಯಲಿದೆ ಎಂದು ಅಣ್ಣಾಮಲೈ ಪ್ರಶ್ನಿಸಿದರು.

Tags:
error: Content is protected !!