Mysore
27
scattered clouds

Social Media

ಬುಧವಾರ, 24 ಡಿಸೆಂಬರ್ 2025
Light
Dark

ಶ್ರೀಹರಿಕೋಟ: ಇಸ್ರೋದಿಂದ ಮತ್ತೊಂದು ಮೈಲಿಗಲ್ಲು

ಶ್ರೀಹರಿಕೋಟ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಮತ್ತೊಂದು ಐತಿಹಾಸಿಕ ಮೈಲಿಗಲ್ಲು ಸಾಧಿಸಿದ್ದು, ಬ್ಲೂಬರ್ಡ್‌ ಬ್ಲಾಕ್‌-2 ವಿದೇಶಿ ಉಪಗ್ರಹವನ್ನು ಯಶಸ್ವಿಯಾಗಿ ಉಡಾವಣೆ ಮಾಡಿದೆ.

ಹೊಸ ತಲೆಮಾರಿನ ಅಮೇರಿಕಾದ ಸಂವಹನ ಉಪಗ್ರಹ ಬ್ಲೂಬರ್ಡ್‌ ಬ್ಲಾಕ್-‌2 ಅನ್ನು ಎಲ್‌ವಿಎಂ3-ಎಂ6 ರಾಕೆಟ್‌ ಇಂದು ನಭಕ್ಕೆ ಹೊತ್ತೊಯ್ದಿದೆ. ಬೆಳಿಗ್ಗೆ 8.55ಕ್ಕೆ ಆಂಧ್ರಪ್ರದೇಶದ ಶ್ರೀಹರಿಕೋಟಾ ಉಡ್ಡಯನ ಕೇಂದ್ರದ ಎರಡನೇ ಲಾಂಚ್‌ ಪ್ಯಾಡ್‌ನಿಂದ ಬ್ಲೂಬರ್ಡ್‌ ಬ್ಲಾಕ್‌-2 ಉಡಾವಣೆ ಯಶಸ್ವಿಯಾಗಿದೆ.

ಇಸ್ರೋ ತನ್ನ ಬ್ಲೂಬರ್ಡ್‌ ಬ್ಲಾಕ್‌-2 ಸಂವಹನ ಉಪಗ್ರಹವನ್ನು ಉಡಾವಣೆ ಮಾಡಿದ್ದು, ಇಸ್ರೋದ ಮುಂಬರುವ ಎಲ್‌ವಿಎಂ3-ಎಂ6 ಕಾರ್ಯಾಚರಣೆಯು, ಅಮೇರಿಕಾ ಮೂಲದ ಎಎಸ್‌ಟಿ ಸ್ಪೇಸ್‌ ಮೊಬೈಲ್‌ನೊಂದಿಗಿನ ವಾಣಿಜ್ಯ ಒಪ್ಪಂದದ ಭಾಗವಾಗಿದೆ.

ಇಸ್ರೋದ ಬ್ಲೂಬರ್ಡ್‌ ಬ್ಲಾಕ್‌-2 ಮಿಷನ್‌ ಮೊಬೈಲ್‌ ಸಂಪರ್ಕದ ವಿಷಯದಲ್ಲಿ ಗೇಮ್‌ ಚೇಂಜರ್‌ ಆಗಿ ಪರಿಣಮಿಸಬಹುದು. ಏಕೆಂದರೆ ಉಪಗ್ರಹವು ಭೂಮಂಡಲದ ನೆಟ್‌ವರ್ಕ್‌ಗಳ ಕೊರತೆಯಿರುವ ಪ್ರದೇಶಗಳಲ್ಲಿ ಸ್ಮಾರ್ಟ್‌ಫೋನ್‌ಗಳಿಗೆ ನೇರವಾಗಿ 4ಜಿ, ಮತ್ತು 5ಜಿ ಸಂಪರ್ಕವನ್ನು ತಲುಪಿಸಲು ಉದ್ದೇಶಿಸಲಾಗಿದೆ.

Tags:
error: Content is protected !!