Mysore
15
scattered clouds

Social Media

ಶನಿವಾರ, 31 ಜನವರಿ 2026
Light
Dark

ಬಾಹ್ಯಾಕಾಶದಲ್ಲಿ ಶುಭಾಂಶು ಶುಕ್ಲಾ: ನೀರು ಕರಡಿ ಪ್ರಯೋಗ ಪೂರ್ಣ

Shubanshu Shukla in space experiment Update

ನವದೆಹಲಿ: ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ 10 ದಿನಗಳ ವಾಸವನ್ನು ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಪೂರೈಸಿದ್ದಾರೆ. ಜೂನ್.‌26ರಂದು ಇತರೆ ಮೂರು ಗಗನಯಾನಿಗಳ ಜೊತೆ ಶುಭಾಂಶು ಶುಕ್ಲಾ ಬಾಹ್ಯಾಕಾಶಕ್ಕೆ ಪಯಣ ಬೆಳೆಸಿದ್ದರು.

ಆಕ್ಸಿಯೋಂ-4 ಮಿಷನ್‌ ಭಾಗವಾಗಿ ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿರುವ ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಅವರು ನೀರು ಕರಡಿ ಪ್ರಯೋಗವನ್ನು ಪೂರ್ಣಗೊಳಿಸಿದ್ದಾರೆ.

ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ತೆ ಈ ಪ್ರಯೋಗ ಸಿದ್ಧಪಡಿಸಿತ್ತು. ಈ ಬಗ್ಗೆ ಇಸ್ರೋ ಮಾಹಿತಿ ಹಂಚಿಕೊಂಡಿದ್ದು, ಶುಭಾಂಶು ಶುಕ್ಲಾ ಐಎಸ್‌ಎಸ್‌ನಲ್ಲಿ ನೀರು ಕರಡಿಗಳನ್ನು ಒಳಗೊಂಡ ಸೂಕ್ಷ್ಮ ಗುರುತ್ವಾಕರ್ಷಣೆಯ ಪ್ರಯೋಗವನ್ನು ಪೂರ್ಣಗೊಳಿಸಿದ್ದಾರೆ.

ಬಾಹ್ಯಾಕಾಶದಲ್ಲಿ ಶುಭಾಂಶು ಶುಕ್ಲಾ ಅವರ ಪ್ರಯೋಗಗಳು ಮುಂದುವರಿದಿದ್ದು, ವಿವಿಧ ಸಸಿಗಳ ಬೀಜಗಳು ಮೊಳಕೆಯೊಡೆಯಲು ಅನುವಾಗುವಂತೆ ನೀರನ್ನು ಹನಿಸಿದ್ದಾರೆ. ಬಾಹ್ಯಾಕಾಶ ಯಾನದ ವೇಳೆ ಸೂಕ್ಷ್ಮ ಗುರುತ್ವಾಕರ್ಷಣೆಯು ಸಸಿಗಳ ಬೆಳವಣಿಗೆ ಮೇಗೆ ಹೇಗೆ ಪರಿಣಾಮ ಬೀರುತ್ತದೆ ಎಂದು ತಿಳಿಯಲು ಈ ಅಧ್ಯಯನ ನಡೆಸಲಾಗುತ್ತಿದೆ.

ಇನ್ನು ಗಗನಯಾತ್ರಿ ಶುಭಾಂಶು ಶುಕ್ಲಾ ಅವರು ಐಎಸ್‌ಎಸ್‌ನ ಕಿಟಕಿ ಎಂದೇ ಕರೆಯಲಾಗುವ ಕಪೋಲಾ ರಂದ್ರದಿಂದ ಹೊರ ಪ್ರಪಂಚವನ್ನು ವೀಕ್ಷಿಸುತ್ತಿರುವ ಚಿತ್ರವನ್ನು ನಾಸಾ ಬಿಡುಗಡೆ ಮಾಡಿದೆ.

Tags:
error: Content is protected !!