ಬಿಹಾರ: ಶ್ರಾವಣ ಸೋಮವಾರ ಪ್ರಯುಕ್ತ ಬರಾವರ್ ಬೆಟ್ಟದ ಬಾಬಾ ಸಿದ್ದಾಂತ ದೇವಾಲಯದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಕನಿಷ್ಠ ಏಳು ಮಂದಿ ಮರಣ ಹೊಂದಿದ್ದು, 50ಕ್ಕೂ ಅಧಿಕ ಮಂದಿಗೆ ಗಾಯಕಗಳಾಗಿವೆ.
ಇಲ್ಲಿನ ಕನ್ವಾರಿಗಳ ನಡುವೆ ಇಲ್ಲದ ವಿಚಾರಕ್ಕೆ ವಾಗ್ವಾದ ನಡೆದಿದ್ದು, ಇದನ್ನು ಚದುರಿಸಲು ಪೊಲೀಸರು ಲಘು ಲಾಠಿಚಾರ್ಜ್ ನಡೆಸಿದ್ದಾರೆ. ಈ ವೇಳೆ ಕಾಲ್ತುಳಿತಕ್ಕೆ ಸಿಲುಕಿ ಮೂವರು ಮಹಿಳೆಯರು ಸೇರಿದಂತೆ ಏಳು ಮಂದಿ ಮೃತಪಟ್ಟಿದ್ದಾರೆ.
ಹಲವು ವಿಷಯಗಳ ಬಗ್ಗೆ ಕನ್ವಾರಿಗಳ ನಡುವೆ ವಾಗ್ವಾದ ಉಂಟಾಗಿದೆ. ಈ ವಾಗ್ವಾದ ಪ್ರಬಲವಾಗಿ ಬೆಳೆದು ಹೊಡೆದಾಟಕ್ಕೆ ತಿರುಗಿದೆ. ಇದನ್ನು ಚುದುರಿಸಲು ಮುಂದಾದ ಪೊಲೀಸರು ಲಾಠಿ ಬೀಸಿದ ಪರಿಣಾಮ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ.
ಪ್ರತಿವರ್ಷ ಶ್ರಾವಣ ಮಾಸದಲ್ಲಿ ಇಲ್ಲಿ ಮಹಾಮಸ್ತಕಾಭಿಷೇಕ ಕಾರ್ಯಕ್ರಮ ನಡೆಯುತ್ತದೆ. ಅದರಂತೆ ಭಾನುವಾರ ರಾತ್ರಿ 11ರ ಸುಮಾರಿಗೆ ಇಲ್ಲಿನ ನಡೆದ ಗಲಾಟೆ ಕೂಪಕ್ಕೆ ತಿರುಗಿ ಕಾಲ್ತುಳಿತ ಉಂಟಾಗಿದ್ದು, ಸಾವು ನೋವು ಸಂಭವಿಸಿದೆ.