Mysore
23
clear sky

Social Media

ಶನಿವಾರ, 24 ಜನವರಿ 2026
Light
Dark

ಜಪಾನ್‌ ಮೊದಲ ಮಹಿಳಾ ಪ್ರಧಾನಿಯಾಗಿ ಸನೇ ತಕೈಚಿ ಆಯ್ಕೆ

ಜಪಾನ್:‌ ಜಪಾನ್‌ ಮೊದಲ ಮಹಿಳಾ ಪ್ರಧಾನಿಯಾಗಿ ಸನೇ ತಕೈಚಿ ಆಯ್ಕೆಯಾಗಿದ್ದಾರೆ.

ಜಪಾನ್‌ನ ಆಡಳಿತಾರೂಢ ಲಿಬರಲ್‌ ಡೆಮಾಕ್ರಟಿಕ್‌ ಪಕ್ಷದ ನಾಯಕಿ ಸನೇ ತಕೈಚಿ ಅವರು ಇಂದು ಕೆಳಮನೆಯಲ್ಲಿ ಐತಿಹಾಸಿಕ ಮತವನ್ನು ಗೆದ್ದರು.

ಇದನ್ನು ಓದಿ: ಮೈಸೂರು| ಮಾಜಿ ಸಂಸದ ರಮೇಶ್ ಕತ್ತಿ ವಿರುದ್ಧ ಪ್ರತಿಭಟನೆ.

ಇದರಿಂದಾಗಿ ದೇಶದ ಮುಂದಿನ ಪ್ರಧಾನಿ ಹಾಗೂ ಮೊದಲ ಮಹಿಳಾ ಪ್ರಧಾನಿಯಾಗಿ ಅವರು ಅಧಿಕಾರ ವಹಿಸಿಕೊಳ್ಳಲು ದಾರಿ ಮಾಡಿಕೊಟ್ಟರು.

ತಕೈಚಿ ಒಟ್ಟು 237 ಮತಗಳನ್ನು ಪಡೆದಿದ್ದಾರೆ ಎಂದು ವರದಿಯಾಗಿದ್ದು, 465 ಸ್ಥಾನಗಳ ಸದನದಲ್ಲಿ ಬಹುಮತಗಳನ್ನು ಪಡೆದಿದ್ದಾರೆ.

ಮೇಲ್ಮನೆಯಲ್ಲೂ ಅವರಿಗೆ ಅನುಮೋದನೆ ದೊರೆಯುವ ನಿರೀಕ್ಷೆಯಿದ್ದು, ಚಕ್ರವರ್ತಿಯನ್ನು ಭೇಟಿಯಾದ ನಂತರ ದೇಶದ 104ನೇ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಕಳೆದ ತಿಂಗಳು ಭಾರೀ ಚುನಾವಣಾ ಸೋಲುಗಳನ್ನು ಎದುರಿಸಿದ ನಂತರ ಉನ್ನತ ಹುದ್ದೆಗೆ ರಾಜೀನಾಮೆ ನೀಡಿದ್ದ ಶಿಗೇರು ಇತಿಬಾ ಅವರ ಸ್ಥಾನವನ್ನು ತಕೈಚಿ ವಹಿಸಲಿದ್ದಾರೆ.

Tags:
error: Content is protected !!