ಹೊಸದಿಲ್ಲಿ : ವಿರೋಧ ಪಕ್ಷಗಳ ತೀವ್ರ ವಿರೋಧ, ಸಾರ್ವಜನಿಕ ವಲಯದ ಆಕ್ರೋಶದ ಬೆನ್ನಲ್ಲೇ ಕೇಂದ್ರ ಸರ್ಕಾರವು ಮೊಬೈಲ್‌ಗಳಲ್ಲಿ ‘ಸಂಚಾರ ಸಾಥಿ’ ಆಪ್ ಅಳವಡಿಕೆ ಕಡ್ಡಾಯಗೊಳಿಸಿದ್ದ ಆದೇಶವನ್ನು ಹಿಂಪಡೆದುಕೊಂಡಿದೆ.
ಮೊಬೈಲ್‌ಗಳಲ್ಲಿ ‘ಸಂಚಾರ ಸಾಥಿ’ ಆಪ್ ಪ್ರಿ ಇನ್‌ಸ್ಟಾಲ್ ಮಾಡುವುದಕ್ಕೆ ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳಿಂದ ವ್ಯಾಪಕ ಟೀಕೆಗಳು ವ್ಯಕ್ತವಾಗಿತ್ತು.
ಒಂದೇ ದಿನದಲ್ಲಿ ಸ್ವಯಂ ಪ್ರೇರಿತವಾಗಿ ಸಂಚಾರ ಸಾಥಿ ಆಪ್ ಡೌನ್‌ಲೋಡ್ ಮಾಡಿಕೊಂಡವರ ಪ್ರಮಾಣ ೧೦ ಪಟ್ಟು ಏರಿಕೆಯಾಗಿತ್ತು. ಈ ಹಿನ್ನೆಲೆಯಲ್ಲಿ ಆಪಲ್ ಸೇರಿದಂತೆ ದೈತ್ಯ ಮೊಬೈಲ್ ತಯಾರಕರಿಗೆ ಆದೇಶವನ್ನು ಹಿಂಪಡೆಯಲಾಗಿದೆ ಎಂದು ಸರ್ಕಾರ ತಿಳಿಸಿದೆ.
ಬಳಕೆದಾರರ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿದೆ. ಬಳಕೆದಾರರಿಗೆ ಸುಲಭವಾಗಿ ಲಭ್ಯವಾಗುವಂತೆ ಮಾಡುವುದು ಸರ್ಕಾರದ ಉದ್ದೇಶವಾಗಿತ್ತು. ಈ ಗ ಸ್ವಂಪ್ರೇರಿತರಾಗಿಯೇ ಆಯಪ್ ಡೌನ್‌ಲೋಡ್ ಮಾಡಿಕೊಳ್ಳುತ್ತಿರುವುದರಿಂದ ಪ್ರಿ ಇನ್ಸ್‌ಸ್ಟಾಲ್ ಕಡ್ಡಾಯಗೊಳಿಸದಿರಲು ನಿರ್ಧರಿಸಲಾಗಿದೆ ಎಂದು ಕೇಂದ್ರ ಸಂಪರ್ಕ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಹೇಳಿದ್ದಾರೆ.
ಇದನ್ನೂ ಓದಿ:-ಪ್ರಧಾನಿ ಮೋದಿ ಚಹಾ ಮಾರುತ್ತಿರುವ ಎಐ ಫೋಟೋ : ಬಿಜೆಪಿ ಖಂಡನೆ
ಸಂಚಾರ ಸಾಥಿ ಅಪ್ಲಿಕೇಷನ್ ಕಡ್ಡಾಯವಲ್ಲ ಬೇಡವಾದರೆ ಮೊಬೈಲ್‌ನಿಂದ ಡಿಲೀಟ್ ಮಾಡಬಹುದು ಎಂದು ಹೇಳಿದರು. ಇದೀಗ ಸಾರ್ವಜನಿಕ ಸಲಹೆಗಳು ಮತ್ತು ಪ್ರತಿಕ್ರಿಯೆಗಳ ಆಧಾರದ ಮೇಲೆ ಈ ನಿಯಮವನ್ನು ತೆಗೆದು ಹಾಕಲಾಗಿದೆ ಎಂದು ಹೇಳಿದ್ದಾರೆ.
ಸಂಸತ್ತಿನ ಮಾತನಾಡಿದ ಸಚಿವ ಜ್ಯೋತಿರಾದಿತ್ಯ ಸಿಂಽಯಾ ಈ ಬಗ್ಗೆ ನಾನು ನೆನ್ನೆಯೇ ಹೇಳಿದ್ದೇನೆ. ಇದೀಗ ಮತ್ತೆ ಸಂಸತ್ತಿನಲ್ಲಿ ಮತ್ತೆ ಹೇಳುತ್ತಿದ್ದೇನೆ. ಮೊಬೈಲ್ ಬಳಕೆದಾರರು ತಮಗೆ ಇಷ್ಟವಿಲ್ಲದ್ದಿದ್ದರೆ, ಈ ಅಪ್ಲಿಕೇಷನ್‌ನ್ನು ಡೌನ್‌ಲೋಡ್ ಮಾಡಿಕೊಳ್ಳುವ ಅಗತ್ಯ ಇಲ್ಲ. ಎಲ್ಲಾ ನಾಗರಿಕರಿಗೆ ಸೈಬರ್ ಭದ್ರತೆಯನ್ನು ಒದಗಿಸುವ ಉದ್ದೇಶದಿಂದ ಸರ್ಕಾರ ಈ ಕ್ರಮವನ್ನು ತಂದಿದೆ. ಇದರ ಜತೆಗೆ ಇನ್ನು ಮುಂದೆ ಬಿಡುಗಡೆ ಆಗುವ ಎಲ್ಲ ಸ್ಮಾರ್ಟ್‌ಫೋನ್‌ಗಳಲ್ಲಿ ಸಂಚಾರ ಸಾಥಿ ಅಪ್ಲಿಕೇಶನ್ ಅನ್ನು ಮೊದಲೇ ಅಳವಡಿಸಬೇಕು ಎಂಬ ಆದೇಶವನ್ನು ನೀಡಲಾಗಿತ್ತು. ಅದನ್ನು ಕೂಡ ವಾಪಸ್ ಪಡೆದಿದ್ದೇವೆ. ಈ ಅಪ್ಲಿಕೇಷನ್ ಸೈಬರ್ ಜಗತ್ತಿನ ದುಷ್ಟ ಶಕ್ತಿಗಳಿಂದ ನಾಗರಿಕರನ್ನು ಕಾಪಾಡುವುದು ನಮ್ಮ ಉದ್ದೇಶವಾಗಿತ್ತು. ಇದರ ಹೊರತು ಬೇರೆ ಯಾವುದೇ ಉದ್ದೇಶವಾಗಿರಲಿಲ್ಲ. ಈ ಅಪ್ಲಿಕೇಷನ್ ಬೇಡವೆಂದರೆ ತೆಗೆದು ಹಾಕಿ ಎಂದು ಹೇಳಿದರು.





