ಮುಂಬೈ: ಬಾಲಿವುಡ್ ಖ್ಯಾತ ನಟಿ ಶೆಫಾಲಿ ಜರಿವಾಲಾ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಮುಂಬೈನ ಅಂಧೇರಿ ಲೋಖಂಡ್ ವಾಲಾ ಪ್ರದೇಶದಲ್ಲಿ ವಾಸಿಸುತ್ತಿರುವ ನಟಿ ಶೆಫಾಲಿಗೆ ಹೃದಯಾಘಾತ ಕಾಣಿಸಿಕೊಂಡಿತ್ತು. ಕೂಡಲೇ ಪತಿ ಪರಾಗ್ ತ್ಯಾಗಿ ನಟಿಯನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಪರಿಶೀಲಿಸಿದ ವೈದ್ಯರು ನಟಿ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ಶೆಫಾಲಿ 2002ರಲ್ಲಿ ಕಾಂಟಾ ಲಗಾ ಎಂಬ ವಿಡಿಯೋ ಮೂಲಕ ಖ್ಯಾತಿ ಗಳಿಸಿದ್ದರು. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಜೊತೆ ಹುಡುಗರು ಎಂಬ ಚಿತ್ರದಲ್ಲಿ ನಾ ಬೋರ್ಡು ಇರದ ಬಸ್ಸನು ಎಂಬ ಹಾಡಿಗೆ ನಟಿ ಹೆಜ್ಜೆ ಹಾಕಿದ್ದರು.




