Mysore
25
haze

Social Media

ಗುರುವಾರ, 29 ಜನವರಿ 2026
Light
Dark

ಅಟಾರ್ನಿ ಜನರಲ್‌ ಆಗಿ ಆರ್.ವೆಂಕಟರಮಣಿ ಮರುನೇಮಕ

ಹೊಸದಿಲ್ಲಿ : ಮುಂದಿನ ಎರಡು ವರ್ಷಗಳ ಅವಧಿಗೆ ಹಿರಿಯ ವಕೀಲ ಆರ್. ವೆಂಕಟರಮಣಿ ಅವರನ್ನು ಭಾರತದ ಅಟಾರ್ನಿ ಜನರಲ್ ಆಗಿ ಮರು ನೇಮಕ ಮಾಡಲಾಗಿದೆ ಎಂದು ಕಾನೂನು ಸಚಿವಾಲಯ ತಿಳಿಸಿದೆ.

ಅಕ್ಟೋಬರ್ ೧ ರಿಂದ ಜಾರಿಗೆ ಬರುವಂತೆ ದೇಶದ ಉನ್ನತ ಕಾನೂನು ಅಧಿಕಾರಿಯಾಗಿ ಆರ್. ವೆಂಕಟರಮಣಿ ಅವರನ್ನು ಮರು ನೇಮಕ ಮಾಡಲಾಗಿದೆ. ಅವರ ಪ್ರಸ್ತುತ ಮೂರು ವರ್ಷಗಳ ಅವಧಿ ಸೆಪ್ಟೆಂಬರ್ ೩೦ ರಂದು ಪೂರ್ಣವಾಗಲಿದೆ.

ಇದನ್ನೂ ಓದಿ:-ಬೆಂಗಳೂರು-ಮುಂಬೈ ನಡುವೆ ಸೂಪರ್‌ಫಾಸ್ಟ್ ರೈಲು ಘೋಷಣೆ

೨೦೨೫ರ ಅಕ್ಟೋಬರ್ ೧ರಿಂದ ಜಾರಿಗೆ ಬರುವಂತೆ ಮುಂದಿನ ಎರಡು ವರ್ಷಗಳ ಅವಧಿಗೆ ಭಾರತದ ಅಟಾರ್ನಿ ಜನರಲ್ ಆಗಿ ಹಿರಿಯ ವಕೀಲರಾದ ಆರ್ ವೆಂಕಟರಮಣಿ ಅವರನ್ನು ಮರು ನೇಮಕ ಮಾಡಲು ರಾಷ್ಟ್ರಪತಿಗಳು ಸಂತೋಷಪಡುತ್ತಾರೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

೨೦೨೨ರ ಸೆಪ್ಟೆಂಬರ್ ೩೦ರಂದು ಅಟಾರ್ನಿ ಜನರಲ್ ಆಗಿದ್ದ ಕೆಕೆ ವೇಣುಗೋಪಾಲ್ ಅವರಿಂದ ವೆಂಕಟರಮಣಿಯವರು ಅಧಿಕಾರ ವಹಿಸಿಕೊಂಡರು. ಅಟಾರ್ನಿ ಜನರಲ್ ಎಂಬುದು ಸಾಂವಿಧಾನಿಕ ಹುದ್ದೆಯಾಗಿದ್ದು, ಕೇಂದ್ರ ಸರ್ಕಾರದ ಶಿಫಾರಸಿನ ಮೇರೆಗೆ ರಾಷ್ಟ್ರಪತಿಗಳು ನೇಮಕ ಮಾಡುತ್ತಾರೆ.

Tags:
error: Content is protected !!