ಕೊಲಂಬೊ: ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು, ಏಪ್ರಿಲ್.5 ರಂದು ಒಂದು ದಿನದ ಮಟ್ಟಿಗೆ ಶ್ರೀಲಂಕಾ ಪ್ರವಾಸ ಕೈಗೊಂಡಿದ್ದಾರೆ ಎಂದು ಶ್ರೀಲಂಕಾ ಅಧ್ಯಕ್ಷ ಅನುರಾ ಕುಮಾರ್ ದಿಸ್ಸೆನಾಯಕ್ ತಿಳಿಸಿದ್ದಾರೆ.
ಶ್ರೀಲಂಕಾ ಸಂಸತ್‌ನಲ್ಲಿ ಶುಕ್ರವಾರ ಈ ಕುರಿತು ಮಾತನಾಡಿದ ಅವರು, ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಶ್ರೀಲಂಕಾ-ಭಾರತದ ಮಧ್ಯೆ ಇರುವ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸಲು ಒಂದು ದಿನದ ಪ್ರವಾಸವನ್ನು ನಮ್ಮ ರಾಷ್ಟ್ರಕ್ಕೆ ಕೈಗೊಳ್ಳಲಿದ್ದಾರೆ. ಅವರ ಸ್ವಾಗತಕ್ಕೆ ನಾವು ಕಾತುರದಿಂದ ಕಾಯುತ್ತಿದ್ದೇವೆ ಎಂದು ಹೇಳಿದರು.
ಇನ್ನು ಭಾರತದ ಸಹಭಾಗಿತ್ವದೊಂದಿಗೆ ಶ್ರೀಲಂಕಾದಲ್ಲಿ ಸೌರ ಶಕ್ತಿ ಉತ್ಪಾದನಾ ಘಟಕಗಳ ಪ್ರಾರಂಭಕ್ಕೆ ಕಳೆದ ವರ್ಷ ಒಪ್ಪಂದ ಮಾಡಿಕೊಂಡಿತ್ತು. 50 ಮೆಗಾ ವ್ಯಾಟ್ ಹಾಗೂ 70 ಮೆಗಾ ವ್ಯಾಟ್ ಸಾಮರ್ಥ್ಯದ ಎರಡು ಸೋಲಾರ್ ಪಾರ್ಕ್‌ಗಳನ್ನು ಟ್ರಿಂ ಕೋಮಲಯ ಸಂಪೂರ್ ಬಳಿ ಭಾರತದ ಸಹಭಾಗಿತ್ವದೊಂದಿಗೆ ನಿರ್ಮಿಸಲಾಗುತ್ತಿದೆ. ಇವುಗಳ ಶಂಕು ಸ್ಥಾಪನೆಯನ್ನು ನರೇಂದ್ರ ಮೋದಿ ಅವರು ಮಾಡಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.