ನವದೆಹಲಿ: ನಾಳೆಯಿಂದ ಹೊಸ ಜಿಎಸ್‌ಟಿ ದರ ಜಾರಿಯಾಗಲಿರುವ ಹಿನ್ನೆಲೆಯಲ್ಲಿ ಇಂದು ಸಂಜೆ ಐದು ಗಂಟೆಗೆ ದೇಶವನ್ನುದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಅವರು ಭಾಷಣ ಮಾಡಲಿದ್ದಾರೆ.
ಜಿಎಸ್‌ಟಿ ದರಗಳು ಜಾರಿಗೆ ಬರುವ ಮೊದಲು ಹೊಸ ಜಿಎಸ್‌ಟಿ ಆಡಳಿತ ಹಾಗೂ ಅದು ಸಾಮಾನ್ಯ ಜನರಿಗೆ ಹೇಗೆ ಪ್ರಯೋಜನವನ್ನು ನೀಡುತ್ತದೆ ಎಂಬುದರ ಕುರಿತು ಪ್ರಧಾನಿ ಮೋದಿ ಅವರು ಮಾತನಾಡುವ ಸಾಧ್ಯತೆಯಿದೆ.
ಪ್ರಧಾನಿ ನರೇಂದ್ರ ಮೋದಿ ಅವರ ಭಾಷಣದ ವಿಷಯದ ಬಗ್ಗೆ ಯಾವುದೇ ಅಧಿಕೃತ ಸಂವಹನವಿಲ್ಲ. ನವರಾತ್ರಿಯ ಮುನ್ನದಿನದಂದು ಭಾಷಣವೂ ಬರುತ್ತದೆ.
ಇನ್ನು ಹೊಸ ದರಗಳ ಅಡಿಯಲ್ಲಿ ಔಷಧಿಗಳು, ಸೋಪಿನಿಂದ ಕಾರಿನ ತನಕ, ಟ್ರ್ಯಾಕ್ಟರ್‌ನಿಂದ ಹವಾ ನಿಯಂತ್ರಕಗಳವರೆಗೆ ಒಟ್ಟು 400 ಉತ್ಪನ್ನಗಳ ಬೆಲೆ ಕಡಿತವಾಗಲಿದೆ. ನಿತ್ಯ ಬಳಸುವ ಆಹಾರ, ಗೃಹೋಪಯೋಗಿ ಉತ್ಪನ್ನಗಳು ಶೇ.5 ತೆರಿಗೆ ವ್ಯಾಪ್ತಿಗೆ ಬರುತ್ತವೆ. ಹಾಲು, ಬ್ರೆಡ್ ಮತ್ತು ಪನ್ನೀರ್‌ನಂತಹ ಉತ್ಪನ್ನಗಳಿಗೆ ಯಾವುದೇ ತೆರಿಗೆ ಇಲ್ಲ. ಪರಿಷ್ಕೃತ ದರಗಳು ನವರಾತ್ರಿಯ ಮೊದಲು ದಿನ ಅಂದರೆ ನಾಳೆಯಿಂದ ಜಾರಿಗೆ ಬರುತ್ತವೆ.





