Mysore
23
clear sky

Social Media

ಬುಧವಾರ, 21 ಜನವರಿ 2026
Light
Dark

ಮಾರುಕಟ್ಟೆಗಳಲ್ಲಿ ಸ್ಥಳೀಯ ವಸ್ತುಗಳ ಖರೀದಿ ಹೆಚ್ಚಳ: ಪ್ರಧಾನಿ ನರೇಂದ್ರ ಮೋದಿ ಸಂತಸ

ನವದೆಹಲಿ: ಜಿಎಸ್‌ಟಿ ಉತ್ಸವದ ಬಗ್ಗೆ ಜನತೆಯಲ್ಲಿ ಸಾಕಷ್ಟು ಉತ್ಸಾಹವಿದೆ. ಈ ಬಾರಿ ಹಬ್ಬಗಳ ಸಮಯದಲ್ಲಿ ಅದನ್ನು ಗಮನಿಸಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಈ ಕುರಿತು ತಮ್ಮ ಮಾಸಿಕ ರೇಡಿಯೋ ಕಾರ್ಯಕ್ರಮ ಮನ್‌ ಕಿ ಬಾತ್‌ನ 127ನೇ ಸಂಚಿಕೆಯಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ಸಂಸ್ಕೃತಿ ಮತ್ತು ಪ್ರಕೃತಿಯ ಆಳವಾದ ಏಕತೆಯನ್ನು ಪ್ರತಿಬಿಂಬಿಸುತ್ತದೆ ಎಂದರು.

ನನ್ನ ಪತ್ರದಲ್ಲಿ ಖಾದ್ಯ ತೈಲದ ಬಳಕೆಯಲ್ಲಿ 10% ಕಡಿತವನ್ನು ನಾನು ಒತ್ತಾಯಿಸಿದ್ದೆ. ಜನರು ಇದಕ್ಕೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಪ್ರದರ್ಶಿಸಿದ್ದಾರೆ ಎಂದು ಹೇಳಿದರು.

ಈ ಹಬ್ಬವು ಸಂಸ್ಕೃತಿ, ಪ್ರಕೃತಿ ಹಾಗೂ ಸಮಾಜದ ಆಳವಾದ ಏಕತೆಯನ್ನು ಪ್ರತಿಬಿಂಬಿಸುತ್ತದೆ. ಛಠ್‌ ಸಮಾಜದ ಪ್ರತಿಯೊಂದು ವರ್ಗವನ್ನು ಒಂದುಗೂಡಿಸುತ್ತಾರೆ. ಇದು ಭಾರತದ ಸಾಮಾಜಿಕ ಏಕತೆಯ ಸುಂದರ ಉದಾಹರಣೆ ಎಂದು ಹೇಳಿದ್ದಾರೆ.

ಇನ್ನು ಆಪರೇಷನ್‌ ಸಿಂಧೂರ್‌ ಪ್ರತಿಯೊಬ್ಬ ಭಾರತೀಯರನ್ನು ಹೆಮ್ಮೆಯಿಂದ ತುಂಬಿದೆ. ಈ ಬಾರಿ ದೀಪಗಳು ಒಂದು ಕಾಲದಲ್ಲಿ ಮಾವೋವಾದಿ ಭಯೋತ್ಪಾದನೆಯ ಕತ್ತಲೆ ಆವರಿಸಿದ್ದ ಪ್ರದೇಶಗಳಲ್ಲಿಯೂ ಸಹ ಸಂತೋಷ ಬೆಳಗಿತು. ಜನರು ತಮ್ಮ ಮಕ್ಕಳ ಭವಿಷ್ಯವನ್ನು ಅಪಾಯಕ್ಕೆ ಸಿಲುಕಿಸಿದ ಮಾವೋವಾದಿ ಭಯೋತ್ಪಾದನೆಯ ಸಂಪೂರ್ಣ ನಿರ್ಮೂಲನೆಯನ್ನು ಬಯಸುತ್ತಾರೆ ಎಂದು ಹೇಳಿದ್ದಾರೆ.

ನಾವೆಲ್ಲರೂ ದೀಪಾವಳಿಯನ್ನು ಆಚರಣೆ ಮಾಡಿದ್ದೇವೆ. ಈಗ ಹೆಚ್ಚಿನ ಸಂಖ್ಯೆಯ ಜನರು ಛಠ್‌ ಪೂಜೆಯಲ್ಲಿ ನಿರತರಾಗಿದ್ದಾರೆ. ಛಠ್‌ನ ಮಹಾಪರ್ವವು ಸಂಸ್ಕೃತಿ, ಪ್ರಕೃತಿ ಹಾಗೂ ಸಮಾಜದ ನಡುವಿನ ಆಳವಾದ ಏಕತೆಯ ಪ್ರತಿಬಿಂಬವಾಗಿದೆ ಎಂದು ಹೇಳಿದರು.

Tags:
error: Content is protected !!