ನವದೆಹಲಿ: ದೇಶದ ಜನತೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಬೆಳಕಿನ ಹಬ್ಬ ದೀಪಾವಳಿಯ ಶುಭ ಕೋರಿದ್ದಾರೆ.
ಈ ಕುರಿತು ಎಕ್ಸ್ ಖಾತೆಯಲ್ಲಿ ಟ್ವೀಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ಅವರು, ನನ್ನ ಎಲ್ಲಾ ದೇಶವಾಸಿಗಳಿಗೆ ದೀಪಾವಳಿಯ ಹಾರ್ದಿಕ ಶುಭಾಶಯಗಳು. ಈ ಪವಿತ್ರ ಬೆಳಕಿನ ಹಬ್ಬವು ಎಲ್ಲರ ಜೀವನವನ್ನು ಸಂತೋಷ, ಸಮೃದ್ಧಿ ಹಾಗೂ ಸಾಮರಸ್ಯದಿಂದ ಬೆಳಗಿಸಲಿ ಎಂದು ಶುಭಾಶಯ ಕೋರಿದ್ದಾರೆ.
ಇನ್ನು ಭಾರತೀಯ ಗ್ರಾಹಕರು ಹಬ್ಬದ ಸಮಯದಲ್ಲಿ ಸ್ಥಳೀಯವಾಗಿ ತಯಾರಿಸಿದ ಸ್ವದೇಶಿ ಉತ್ಪನ್ನಗಳನ್ನು ಬೆಂಬಲಿಸುವಂತೆ ಪ್ರಧಾನಿ ಮೋದಿ ಕರೆ ನೀಡಿದ್ದಾರೆ.
140 ಕೋಟಿ ಭಾರತೀಯರ ಕಠಿಣ ಪರಿಶ್ರಮ, ಸೃಜನಶೀಲತೆ ಮತ್ತು ನಾವೀನ್ಯತೆಯನ್ನು ಆಚರಿಸುವ ಮೂಲಕ ಈ ಹಬ್ಬದ ಋತುವನ್ನು ಆಚರಿಸೋಣ. ಭಾರತೀಯ ಉತ್ಪನ್ನಗಳನ್ನು ಖರೀದಿಸೋಣ ಮತ್ತು ಹೇಳೋಣ. ನೀವು ಖರೀದಿ ಮಾಡಿದ್ದನ್ನು ಸಾಮಾಜಿಕ ಜಾಲತಾಣದಲ್ಲೂ ಹಂಚಿಕೊಳ್ಳಿ. ಈ ರೀತಿಯಾಗಿ ನೀವು ಇತರರನ್ನು ಸಹ ಅದೇ ರೀತಿ ಮಾಡಲು ಪ್ರೇರಿಪಿಸುತ್ತೀರಿ ಎಂದು ಹೇಳಿದ್ದಾರೆ.





