Mysore
28
overcast clouds

Social Media

ಬುಧವಾರ, 25 ಜೂನ್ 2025
Light
Dark

ನಮೋ ಭಾರತ್‌ ರೈಲಿನಲ್ಲಿ ಪ್ರಧಾನಿ ಮೋದಿ ಪ್ರಯಾಣ

ನವದೆಹಲಿ: ಉತ್ತರ ಪ್ರದೇಶದ ಸಾಹಿಬಾಬಾದ್‌ನಿಂದ ದೆಹಲಿಯ ನ್ಯೂ ಅಶೋಕ್‌ ನಗರ ನಿಲ್ದಾಣದವರೆಗೆ ನಮೋ ಭಾರತ್‌ ರೈಲಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಪ್ರಯಾಣಿಸಿದ್ದಾರೆ.

ಮೋದಿ ಅವರು ಇಂದು(ಜನವರಿ.5) ದೆಹಲಿ-ಮೀರತ್‌ ಪ್ರಾದೇಶಿಕ ರಾಪಿಡ್‌ ಟ್ರಾನ್ಸಿಟ್‌ ಸಿಸ್ಟಂ(ಆರ್‌ಆರ್‌ಟಿಎಸ್)‌ ಕಾರಿಡಾರ್‌ ಅನ್ನು ಉದ್ಘಾಟಿಸಿದ್ದಾರೆ. ಅಲ್ಲದೇ ಈ ವೇಳೆ 12 ಸಾವಿರ ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದ್ದಾರೆ.

ಇನ್ನೂ ಉದ್ಘಾಟನೆ ಕಾರ್ಯಕ್ರಮ ಪೂರ್ಣಗೊಂಡ ಬಳಿಕ ಸಾಹಿಬಾಬಾದ್ ನಿಲ್ದಾಣದಿಂದ ನ್ಯೂ ಅಶೋಕ್‌ ನಗರ ನಿಲ್ದಾಣದವರೆಗೆ ನಮೋ ಭಾರತ್‌ ರೈಲಿನಲ್ಲಿ ಸುಮಾರು13 ಕಿ.ಮೀ. ದೂರ ಪ್ರಯಾಣಿಸಿದ್ದಾರೆ. ಈ ಸಂದರ್ಭದಲ್ಲಿ ಮೋದಿ ಅವರು ತಮ್ಮ ಪ್ರಯಾಣದ ವೇಳೆ ಮಕ್ಕಳು ಹಾಗೂ ಸಾರ್ವಜನಿಕರೊಂದಿಗೆ ಸಂವಾದ ನಡೆಸಿದ್ದಾರೆ.

ನ್ಯೂ ಅಶೋಕ ನಗರ ಹಾಗೂ ಮೀರತ್‌ ಸೌತ್‌ ನಡುವೆ 11 ನಿಲ್ದಾಣಗಳಿವೆ. ಪ್ರಯಾಣಿಕರ ಓಡಾಟಕ್ಕೆ ಇಂದು ಸಂಜೆ 5 ಗಂಟೆಗೆ ಪ್ರಾರಂಭವಾಗಲಿದೆ. ರೈಲುಗಳು ಪ್ರತಿ 15 ನಿಮಿಷಗಳಿಗೊಮ್ಮೆ ಲಭ್ಯವಿರುತ್ತದೆ ಎಂಬ ಮಾಹಿತಿ ಲಭ್ಯವಾಗಿದೆ.

Tags:
error: Content is protected !!