ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇಂದು ಸೈಪ್ರಸ್ ಭೇಟಿಯ ಸಂದರ್ಭದಲ್ಲಿ ಸೈಪ್ರಸ್‌ನ ಅತ್ಯುನ್ನತ ನಾಗರಿಕ ಗೌರವವಾದ ಗ್ರ್ಯಾಂಡ್ ಕ್ರಾಸ್ ಆಫ್ ಸಿ ಆರ್ಡರ್ ಆಫ್ ಮೆಕರಿಯೋಸ್ ಅನ್ನು ಪ್ರದಾನ ಮಾಡಲಾಯಿತು.
ಈ ವೇಳೆ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ಈ ಗೌರವಕ್ಕಾಗಿ ಸೈಪ್ರೆಸ್ ಅಧ್ಯಕ್ಷರು ಮತ್ತು ಅದರ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸಿದರು.
ಇದನ್ನೂ ಓದಿ:- ದೇಶದಲ್ಲಿ ಜನಗಣತಿ ಸರ್ವೆ ನಡೆಸಲು ಕೇಂದ್ರ ಸರ್ಕಾರದಿಂದ ಗೆಜೆಟೆಡ್ ಅಧಿಸೂಚನೆ ಪ್ರಕಟ
ಈ ಕುರಿತು ಸಾಮಾಜಿಕ ಜಾಲತಾಣವಾದ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ಅವರು, ನಾನು ಸೈಪ್ರೆಸ್ ಸರ್ಕಾರ ಹಾಗೂ ಸೈಪ್ರೆಸ್ ಜನರಿಗೆ ಹೃತ್ಪೂರ್ವಕ ಕೃತಜ್ಞತೆಗಳನ್ನು ಅರ್ಪಿಸುತ್ತೇನೆ. ಇದು ನನಗೆ ಮಾತ್ರವಲ್ಲ. 140 ಕೋಟಿ ಭಾರತೀಯರಿಗೆ ಸಂದ ಗೌರವ. ಇದು ನಮ್ಮ ಸಂಸ್ಕೃತಿ, ಸಹೋದರತ್ವ ಮತ್ತು ವಸುಧೈವ ಕುಟುಂಬಕಂ ಸಿದ್ಧಾಂತಕ್ಕೆ ಸಂದ ಗೌರವ. ಈ ಪ್ರಶಸ್ತಿಯು ಶಾಂತಿ, ಭದ್ರತೆ, ಸಾರ್ವಭೌಮತ್ವ, ಪ್ರಾದೇಶಿಕ ಸಮಗ್ರತೆ ಹಾಗೂ ನಮ್ಮ ಜನರಿಗೆ ನಮ್ಮ ಅಚಲ ಬದ್ಧತೆಯ ಸಂಕೇತವಾಗಿದೆ ಎಂದು ಹೇಳಿದರು.





