ಕೇರಳ: ರಾಜ್ಯದ ಪ್ರಸಿದ್ಧ ಶಬರಿಮಲೆಯಲ್ಲಿರುವ ಅಯ್ಯಪ್ಪ ದೇವಾಲಯಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು.
ಈ ಮೂಲಕ ಶಬರಿಮಲೆ ದೇವಾಲಯಕ್ಕೆ ಭೇಟಿ ನೀಡಿದ ದೇಶದ ಎರಡನೇ ರಾಷ್ಟ್ರಪತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಬೆಳಿಗ್ಗೆಯೇ ಪಂಪಾ ತಲುಪಿದ ಅವರು, ಪಂಪಾ ನದಿಯಲ್ಲಿ ಕಾಲು ತೊಳೆದು ಅಲ್ಲಿಯೇ ಸಮೀಪ ಇರುವ ಗಣಪತಿ ದೇವಾಲಯ ಸಹಿತ ಹಲವು ದೇವಸ್ಥಾನಗಳಿಗೆ ಭೇಟಿ ನೀಡಿದರು.
ಇರುಮುಡಿ ಹೊತ್ತು ದೇವಾಲಯದ ಸಮೀಪ ಈಡುಗಾಯಿ ಒಡೆದರು.
ಬಳಿಕ ಸನ್ನಿಧಾನದ 18 ಮೆಟ್ಟಿಲುಗಳನ್ನು ಏರಿದರು.





