Light
Dark

ಸ್ವರಾಜ್‌ ವಿಶೇಷ ಸರಣಿ ವೀಕ್ಷಿಸಿದ ಪ್ರಹ್ಲಾದ್ ಜೋಶಿ : ಪ್ರದರ್ಶನದ ಕುರಿತು ಸರಣಿ ಟ್ವೀಟ್‌

ನವದೆಹಲಿ: ‘ಸ್ವರಾಜ್‌-ಭಾರತ್ ಕೆ ಸ್ವತಂತ್ರ ಸಂಗ್ರಾಮ ಕಿ ಸಮಗ್ರ ಗಾಥಾ’ ಎಂಬ ಸ್ವಾತಂತ್ರ್ಯ ಹೋರಾಟಗಾರರ ಕುರಿತಾದ ವಿಶಿಷ್ಟ ಸರಣಿ ನಿರ್ಮಾಣ/ ಪ್ರದರ್ಶನದ ಬಗ್ಗೆ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಕನ್ನಡ, ಹಿಂದಿ, ಇಂಗ್ಲಿಷ್‌ ನಲ್ಲಿ ಸರಣಿ ಟ್ವೀಟ್ ಮಾಡಿದ್ದಾರೆ.

ದೆಹಲಿಯ ಸಂಸತ್ ಭವನದ GMC ಬಾಲಯೋಗಿ ಆಡಿಟೋರಿಯಂನಲ್ಲಿ ಏರ್ಪಡಿಸಲಾಗಿದ್ದ ಈ ವಿಶಿಷ್ಟ ಸರಣಿ ಪ್ರದರ್ಶನವನ್ನು ಪ್ರಧಾನಿ ಮೋದಿ ನೇತೃತ್ವದಲ್ಲಿ ಸ್ವರಾಜ್ ಸಿನಿಮಾ ವೀಕ್ಷಣೆ ವೀಕ್ಷಿಸಿದ ಬಳಿಕ ಸಚಿವ ಪ್ರಹ್ಲಾದ್ ಜೋಶಿ ತಮ್ಮ ಭಾವನಾತ್ಮಕ ಅನಿಸಿಕೆ ಹಂಚಿಕೊಂಡಿದ್ದಾರೆ.

ನಮ್ಮ ಸ್ವಾತಂತ್ರ್ಯ ಹೋರಾಟಗಾರರ ಕುರಿತು ದೂರದರ್ಶನ ನಿರ್ಮಾಣ ಮಾಡಿರುವ ವಿಶಿಷ್ಟ ಸರಣಿ ʼಸ್ವರಾಜ್‌-ಭಾರತ್ ಕೆ ಸ್ವತಂತ್ರ ಸಂಗ್ರಾಮ ಕಿ ಸಮಗ್ರ ಗಾಥಾʼದ ವಿಶೇಷ ಪ್ರದರ್ಶನವನ್ನು ಜಿಎಮ್‌ಸಿ ಬಾಲಯೋಗಿ ಸಭಾಭವನದಲ್ಲಿ ಏರ್ಪಡಿಸಲಾಗಿತ್ತು. ಪ್ರಧಾನಿ ಮೋದಿ ಅವರೊಂದಿಗೆ ಈ ವಿಶೇಷ ಕಾರ್ಯಕ್ರಮದಲ್ಲಿ ವೀರ ದೇಶ ಭಕ್ತರ ಕಥೆಯನ್ನು ವೀಕ್ಷಿಸಿ ಪುಳಕಿತನಾದೆ.

ಉಲ್ಲಾಳದ ರಾಣಿ ಅಬ್ಬಕ್ಕ, ಕೆಳದಿಯ ಶಿವಪ್ಪ ನಾಯಕ್‌ ಮತ್ತು ಕೆಳದಿ ಚೆನ್ನಮ್ಮ ಅವರ ಸಂಕಲ್ಪ, ಹೋರಾಟ ಮತ್ತು ಸಮರ್ಪಣೆ ಕುರಿತು ಸಂಚಿಕೆ ಪ್ರದರ್ಶಿಸಲಾಯಿತು. ಅವರ ದೇಶ ಭಕ್ತಿ ಮತ್ತು ಬಲಿದಾನ ಚಕಿತಗೊಳಿಸುವಂತಹದ್ದು ಹಾಗೂ ಸ್ಫೂರ್ತಿ ನೀಡುವಂತಹದ್ದು.
75 ಸಂಚಿಕೆಯ ಈ ವಿಶೇಷ ಸರಣಿಯನ್ನು ತಾವೆಲ್ಲರೂ ಖಂಡಿತವಾಗಿಯೂ ನೋಡಲೇ ಬೇಕು. ಪ್ರತಿ ಸಂಚಿಕೆಯೂ ನಮ್ಮ ವೀರ ಹಾಗೂ ಸ್ಪೂರ್ತಿಯ ಚಿಲುಮೆಯಂತಿದ್ದ ಹಲವು ನಾಯಕರ ಇತಿಹಾಸವನ್ನು ತಿಳಿಸುತ್ತದೆ ಹಾಗೂ ದೇಶಭಕ್ತಿಯನ್ನು ಮತ್ತಷ್ಟು ಜಾಗೃತಗೊಳಿಸುತ್ತದೆ. ಪ್ರತಿ ಭಾನುವಾರ ರಾತ್ರಿ 9 ಗಂಟೆಗೆ @DDNational ನಲ್ಲಿ ಈ ಸರಣಿ ಪ್ರಸಾರವಾಗಲಿದೆ ಎಂದು ಟ್ವೀಟ್  ಮಾಡಿದ್ದಾರೆ.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ