ಟೋಕಿಯೊ : ಜಪಾನ್ ಪ್ರಧಾನಿ ಶಿಗೆರು ಇಶಿಬಾ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಭಾನುವಾರ ಘೋಷಿಸಿದ್ದಾರೆ.
ಆಡಳಿತಾರೂಢ ಲಿಬರಲ್ ಡೆಮಾಕ್ರಟಿಕ್ ಪಕ್ಷದಲ್ಲಿ ವಿಭಜನೆಯನ್ನು ತಡೆಗಟ್ಟಲು ಶಿಗೆರು ಇಶಿಬಾ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ ಎಂದು ವರದಿಗಳು ಹೇಳುತ್ತಿವೆ. ಜಪಾನ್ ರಾಜಕೀಯದಲ್ಲಿ ಪ್ರಸ್ತುತ ರಾಜಕೀಯ ಅಸ್ಥಿರತೆ ಇದೆ, ಇದು ಕಳೆದ 5 ವರ್ಷಗಳಿಂದ ಮುಂದುವರೆದಿದೆ.
ಜುಲೈನಲ್ಲಿ ನಡೆದ ಚುನಾವಣೆಯಲ್ಲಿ ಇಶಿಬಾ ಅವರ LDP ನೇತೃತ್ವದ ಒಕ್ಕೂಟವು ಮೇಲ್ಮನೆಯಲ್ಲಿ ಬಹುಮತವನ್ನು ಕಳೆದುಕೊಂಡಿತ್ತು. ತಮ್ಮದೇ ಪಕ್ಷದೊಳಗಿಂದಲೇ ಟೀಕೆಗಳು ಹೆಚ್ಚಾದ ನಂತರ ಮತ್ತು ಜುಲೈನಲ್ಲಿ ನಡೆದ ಸಂಸತ್ ಚುನಾವಣೆಯಲ್ಲಿ ಹೀನಾಯ ಸೋಲಿನ ನಂತರ ಅವರು ಈ ನಿರ್ಧಾರ ತೆಗೆದುಕೊಂಡಿದ್ದಾರೆ.





