ಗೋವಾ: ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿ ವರ್ಷದಂತೆ ಈ ವರ್ಷವೂ ಭಾರತೀಯ ನೌಕಾಪಡೆಯೊಂದಿಗೆ ದೀಪಾವಳಿ ಹಬ್ಬ ಆಚರಿಸಿದ್ದಾರೆ.
ಗೋವಾ ಮತ್ತು ಕಾರವಾರ ಕರಾವಳಿಯಲ್ಲಿ ಸಶಸ್ತ್ರ ಪಡೆಗಳ ಸದಸ್ಯರೊಂದಿಗೆ ಐಎನ್‌ಎಫ್ ವಿಕ್ರಾಂತ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ದೀಪಾವಳಿ ಆಚರಣೆ ಮಾಡಿ ಖುಷಿಪಟ್ಟರು.
ಬಳಿಕ ಸಿಬ್ಬಂದಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಆ ಕ್ಷಣವನ್ನು ಆಳವಾಗಿ ಸಾಂಕೇತಿಕ ಮತ್ತು ಸ್ಮರಣೀಯ ಎಂದು ಬಣ್ಣಿಸಿದರು. ಇಂದು ಅದ್ಬುತ ದಿನ. ಈ ದೃಶ್ಯ ಸ್ಮರಣೀಯ. ಒಂದು ಕಡೆ ನನಗೆ ಸಾಗರವಿದೆ. ಮತ್ತೊಂದೆಡೆ ಭಾರತ ಮಾತೆಯ ವೀರ ಸೈನಿಕರ ಶಕ್ತಿ ಇದೆ.
ಸ್ಥಳೀಯ ವಿಮಾನವಾಹಕ ನೌಕೆಯ ಡೆಕ್ ಮೇಲೆ ನಿಂತು ಮಾತನಾಡಿದ ಪ್ರಧಾನಿ ಮೋದಿ ಇಂದು ಒಂದು ಕಡೆ ನನಗೆ ಅನಂತ ದಿಗಂತಗಳು ಮತ್ತು ಅವಕಾಶವಿದೆ. ಇನ್ನೊಂದು ಕಡೆ ಅನಂತ ಶಕ್ತಿಯನ್ನು ಸಾಕಾರಗೊಳಿಸುವ ಐಎನ್‌ಎಸ್ ವಿಕ್ರಾಂತ್ ನಿಂತಿದೆ. ಸಾಗರದ ನೀರಿನ ಮೇಲೆ ಸೂರ್ಯನ ಕಿರಣಗಳ ಹೊಳಪು ನಮ್ಮ ವೀರ ಸೈನಿಕರು ಬೆಳಗಿನ ದೀಪಾವಳಿ ದೀಪಗಳಂತೆ ಭಾಸವಾಗುತ್ತದೆ ಎಂದು ಹೇಳಿದರು.





