ಸ್ಟಾಕ್‌ಹೋಮ್: ಅಮೆರಿಕಾದ ಜೆಫ್ರಿ ಹಿಂಟನ್ ಹಾಗೂ ಜಾನ್ ಹಾಪ್ ಫೀಲ್ಡ್‌ಗೆ ಅವರಿಗೆ ಮೆಷಿನ್ ಲರ್ನಿಂಗ್ ಹಾಗೂ ಕೃತಕ ನ್ಯೂರಲ್ ನೆಟ್‌ವರ್ಕ್‌ನ ವಿಷಯದ ಕುರಿತು ಸಂಶೋಧನಾ ಮತ್ತು ಆವಿಷ್ಕಾರಗಳಿಗೆ ಸಂಬಂಧಿಸಿದಂತೆ ಈ ಬಾರಿಯ ಭೌತವಿಜ್ಞಾನ ಕ್ಷೇತ್ರದ ನೊಬೆಲ್ ಪ್ರಶಸ್ತಿ ಪುರಸ್ಕಾರವನ್ನು ಘೋಷಿಸಲಾಗಿದೆ.
ಈ ಇಬ್ಬರು ವಿಜ್ಞಾನಿಗಳು ಭೌತಶಾಸ್ತ್ರದ ಸಾಧನಗಳನ್ನು ಬಳಸಿಕೊಂಡು ಕೃತಕ ನ್ಯೂರಲ್ ನೆಟ್‌ವರ್ಕ್‌ನಲ್ಲಿ ಮೆಷಿನ್ ಲರ್ನಿಂಗ್ ಸಕ್ರಿಯಗೊಳಿಸಲು ಶ್ರಮಿಸಿದ್ದಾರೆ ಎಂದು ಪರಿಗಣಿಸಿ ಇವರಿಗೆ ಪ್ರಶಸ್ತಿಯನ್ನು ನೀಡಲಾಗುತ್ತಿದೆ ಎಂದು ಆಯ್ಕೆ ಸಮಿತಿ ತಿಳಿಸಿದೆ. ಪ್ರಶಸ್ತಿ ಪ್ರದಾನ ಮಾಡಲಾಗುವ ಸಂದರ್ಭದಲ್ಲಿ 11 ಮಿಲಿಯನ್ ಸ್ವೀಡಿಶ್ ಕ್ರಾನ್ (8.19 ಕೋಟಿ ರೂ.) ನಗದು ಬಹುಮಾನವನ್ನು ನೀಡಲಾಗುವುದು ಎಂದು ವರದಿ ಮಾಡಿದೆ.





