ನವದೆಹಲಿ: ಇಂದಿನಿಂದ ಸಂಸತ್ ಚಳಿಗಾಲದ ಅಧಿವೇಶನ ಆರಂಭವಾಗುತ್ತಿದ್ದು, ಇದಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಭಾಷಣ ಮಾಡಿದ್ದಾರೆ.
ಭಾರತ ಪ್ರಜಾಪ್ರಭುತ್ವವನ್ನು ಗೆಲ್ಲಿಸಿದೆ ಎಂದು ಬಿಹಾರ ಚುನಾವಣೆ ಫಲಿತಾಂಶವನ್ನು ಉಲ್ಲೇಖಿಸಿ ವಿಪಕ್ಷಗಳಿಗೆ ಟಾಂಗ್ ನೀಡಿದ್ದಾರೆ.
ಸಂಸತ್ತಿನ ಚಳಿಗಾಲದ ಅಧಿವೇಶನವು ಸಂಸ್ಥೆಯು ಏನು ಯೋಚಿಸುತ್ತಿದೆ, ಏನು ಮಾಡಲು ಬಯಸುತ್ತಿದೆ ಹಾಗೂ ಏನು ಸಾಧಿಸಲಿದೆ ಎಂಬುದರ ಮೇಲೆ ಕೇಂದ್ರೀಕೃತವಾಗಿರಬೇಕು ಎಂದು ಹೇಳಿದರು.
ಇದನ್ನು ಓದಿ: ಮೆಕ್ಕೆಜೋಳಕ್ಕೆ 2400 ರೂ ನಿಗದಿ: ಮಾರ್ಗಸೂಚಿ ಹೊರಡಿಸಿದ ರಾಜ್ಯ ಸರ್ಕಾರ
ಅಧಿವೇಶನ ಪ್ರಾರಂಭವಾಗುವ ಮುನ್ನ ತಮ್ಮ ಹೇಳಿಕೆಗಳಲ್ಲಿ ಪ್ರಧಾನಿ ಮೋದಿ ಅವರು ವಿರೋಧ ಪಕ್ಷಗಳು ಸಾರ್ವಜನಿಕ ಹಿತಾಸಕ್ತಿಯ ವಿಷಯಗಳನ್ನು ಎತ್ತಬೇಕು. ಆದರೆ ಸೋಲಿನ ಹತಾಶೆಯನ್ನು ಮೀರಿ ನಿಲ್ಲಬೇಕು ಎಂದು ಕರೆ ನೀಡಿದರು.
ಅಧಿವೇಶನವು ಅರ್ಥಪೂರ್ಣ ಚರ್ಚೆ ಹಾಗೂ ನಿರ್ಧಾರಗಳೊಂದಿಗೆ ಮುಂದುವರಿಯುತ್ತದೆ. ರಾಷ್ಟ್ರದ ಆದ್ಯತೆಗಳನ್ನು ಮುಂಚೂಣಿಯಲ್ಲಿಡುತ್ತದೆ ಎಂದು ಆಶಿಸಿದರು.





