ನವದೆಹಲಿ : ಇದು ಕಾಂಗ್ರೆಸ್ ಪ್ರಣಾಳಿಕೆಯ ಯಥಾವತ್ ಪ್ರಸ್ತುತಿ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಬಜೆಟ್ ಭಾಷಣ ಕುರಿತು ಕಾಂಗ್ರೆಸ್ ಹಿರಿಯ ನಾಯಕ ಪಿ ಚಿದಂಬರ ಲೇವಡಿ ಮಾಡಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ಲೋಕಸಭಾ ಚುನಾವಣಾ ಫಲಿತಾಂಶದ ನಂತರ ಮಾನ್ಯ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಈ ಬಾರಿಯ ಕಾಂಗ್ರೆಸ್ ಪ್ರಣಾಳಿಕೆಯನ್ನೆ ಮತ್ತೊಮ್ಮೆ ಓದಿದ್ದಾರೆ ಎಂದು ನನಗೆ ಸಂತೋಷವಾಗಿದೆ. ಕಾಂಗ್ರೆಸ್ ಪ್ರಣಾಳಿಕೆಯ ಪುಟ ೩೦ ರಲ್ಲಿ ವಿವರಿಸಿರುವ ಉದ್ಯೋಗ ಸಂಯೋಜಿತ ಪೋತ್ಸಾಹವನ್ನು ಮೋದಿ ಸರ್ಕಾರ ತನ್ನ ಬಜೆಟ್ ನಲ್ಲಿ ವಾಸ್ತವಿಕವಾಗಿ ಅಳವಡಿಸಿಕೊಂಡಿದೆ ಎಂದು ನನಗೆ ಸಂತೋಷವಾಯಿತು. ಪ್ರಣಾಳಿಕೆ ಪುಟ ೧೧ ರಲ್ಲಿ ಪ್ರತಿ ಅಪ್ರೆಂಟಿಸ್ ಗೆ ಭತ್ಯೆಯೊಂದಿಗೆ ಅಪ್ರೆಂಟಿಸ್ ಶಿಪ್ ಯೋಜನೆಯನ್ನು ಪರಿಚಯಿಸಿದ್ದಾರೆ. ಕಾಂಗ್ರೆಸ್ ಸರ್ಕಾರದ ಪ್ರಣಾಳಿಕೆಯ ಇತರೆ ವಿಚಾರಗಳನ್ನೆ ನಿರ್ಮಲಾ ಸೀತಾರಾಮನ್ ನಕಲು ಮಾಡಿದ್ದಾರೆ ಎಂದು ಹೇಳಲು ನಾನು ಭಯಸುತ್ತೇನೆ. ಉಳಿದ ಮಾಹಿತಿಯನ್ನ ನಾನು ಶೀಘ್ರದಲ್ಲೆ ಪಟ್ಟಿ ಮಾಡುತ್ತೇನೆ ಎಂದು ಬರೆದುಕೊಂಡಿದ್ದಾರೆ.