Mysore
22
overcast clouds
Light
Dark

ಮಹಾ ಮಾದರಿ ಕರ್ನಾಟಕದಲ್ಲೂ ಆಪರೇಷನ್‌ ಕಮಲ ಆಗಲಿದೆ: ಸಿಎಂ ಶಿಂಧೆ

ಮಹಾರಾಷ್ರ: ಲೋಕಸಭಾ ಚುನಾವಣೆ ನಂತರ ಮಹಾರಾಷ್ಟ್ರ ಮಾದರಿಯಲ್ಲಿ ಕರ್ನಾಟಕದಲ್ಲೂ ಆಪರೇಷನ್‌ ಕಮಲ ಆಗಲಿದೆ ಎಂದು ಮಹಾರಾಷ್ಟ್ರ ಸಿಎಂ ಏಕ್‌ನಾಥ್‌ ಶಿಂಧೆ ಶಾಕಿಂಗ್‌ ಹೇಳಿಕೆ ನೀಡಿದ್ದಾರೆ.

ಮಹಾರಾಷ್ಟ್ರದ ಸತರಾ ಜಿಲ್ಲೆಯ ಪ್ರಚಾರದ ವೇಳೆ ಸಿಎಂ ಶಿಂಧೆ ಈ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ. ಕರ್ನಾಟಕದಲ್ಲಿ ಮಹಾ ಮಾದರಿ ಆಪರೇಷನ್‌ ಕಮಲ ನಡೆಯಲಿದೆ ಎಂದು ಹೇಳಿದ್ದಾರೆ.

ಚುನಾವಣಾ ಪ್ರಚಾರ ನಿಮಿತ್ತ ಬೆಳಗಾವಿಗೆ ಹೋಗಿದ್ದಾಗ, ನಾಥ ಯಾರೆಂದು ನೋಡಲು ಬಂದಿದ್ದರು. ಈ ಮಹಾರಾಷ್ಟ್ರ ಮಾದರಿಯಲ್ಲಿ ಕರ್ನಾಟಕದಲ್ಲೂ ನಾಥ್‌ ಮಾದರಿಗೆ ಮನವಿ ಮಾಡಿದ್ದಾರೆ ಎಂದು ಶಿಂಧೆ ಹೇಳಿದ್ದಾರೆ.

ಆದರೆ ಮಾಧ್ಯಮಗಳು ಕರ್ನಾಟಕದಲ್ಲಿ ಮಹಾ ಮಾದರಿಯಲ್ಲಿ ಲೋಕಸಭಾ ಚುನಾವಣೆ ನಂತರ ಆಪರೇಷನ್‌ ಕಮಲ ಆಗಲಿದೆಯಾ ಎಂಬ ಮಾಧ್ಯಮಗಳ ಪ್ರಶ್ನೆಗೆ ಯಾವುದೇ ಉತ್ತರ ನೀಡದ ಸಿಎಂ ಶಿಂಧೆ ನಕ್ಕು ಅಲ್ಲಿಂದ ನಿರ್ಗಮಿಸಿದರು.