Mysore
23
few clouds

Social Media

ಮಂಗಳವಾರ, 20 ಜನವರಿ 2026
Light
Dark

ಕೋವಿಡ್‌ ಲಸಿಕೆಗೂ ಹೃದಯಾಘಾತಕ್ಕೂ ಯಾವುದೇ ಸಂಬಂಧವಿಲ್ಲ: ಐಸಿಎಂಆರ್‌, ಏಮ್ಸ್ ಅಧ್ಯಯನದಿಂದ ಬಹಿರಂಗ

no link between Covid vaccine and heart attack ICMR AIIMS study

ನವದೆಹಲಿ: ಕೋವಿಡ್‌ ಲಸಿಕೆಗೂ ಹೃದಯಾಘಾತಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಐಸಿಎಂಆರ್‌ ಹಾಗೂ ಏಮ್ಸ್‌ ನಡೆಸಿದ ಅಧ್ಯಯನದಿಂದ ಬಹಿರಂಗವಾಗಿದೆ.

ಕಳೆದ 2020ರಿಂದ ಹೃದಯಾಘಾತದಿಂದ ಯುವಜನರ ಹಠಾತ್‌ ಸಾವುಗಳು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದ್ದು, ಹೆಚ್ಚಿನವರು ಇದು ಕೋವಿಡ್‌ ಎಫೆಕ್ಸ್‌ ಎಂದು ಹೇಳುತ್ತಿದ್ದಾರೆ.

ಈ ಹಿನ್ನೆಲೆಯಲ್ಲಿ ಕೋವಿಡ್-‌19 ಲಸಿಕೆಗಳು ಹಾಗೂ ಹೃದಯಾಘಾತದಿಂದ ಉಂಟಾಗುವ ಹಠಾತ್‌ ಸಾವುಗಳ ಹೆಚ್ಚಳದ ನಡುವೆ ಯಾವುದೇ ಸಂಬಂಧ ಕಂಡುಬಂದಿಲ್ಲ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಹೇಳಿದೆ.

ವಯಸ್ಕರಲ್ಲಿ ಹಠಾತ್‌ ಸಾವಿನ ಕುರಿತು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಮತ್ತು ಅಖಿಲ್‌ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ ನಡೆಸಿದ ವ್ಯಾಪಕ ಅಧ್ಯಯನಗಳ ಕುರಿತು ಸಚಿವಾಲಯವು ಈ ಹೇಳಿಕೆಯನ್ನು ಸಮರ್ಥಿಸಿಕೊಂಡಿದೆ.

ಅನುವಂಶಿಕತೆ, ಜೀವನಶೈಲಿ ಸೇರಿದಂತೆ ವಿವಿಧ ಅಂಶಗಳಿಂದಾಗಿ ಹಠಾತ್‌ ಹೃದಯ ಸಾವುಗಳು ಸಂಭವಿಸಬಹುದು ಎಂದು ಸ್ಪಷ್ಟಪಡಿಸಿದೆ.

Tags:
error: Content is protected !!