Mysore
29
broken clouds

Social Media

ಶುಕ್ರವಾರ, 24 ಏಪ್ರಿಲ 2026
Light
Dark

ಮೂಡದ ಒಮ್ಮತ : ಅಮೆರಿಕ-ಇರಾನ್ 21 ಗಂಟೆಗಳ ಮಾತುಕತೆ ವಿಫಲ

ಇಸ್ಲಾಮಾಬಾದ್ : ಪಶ್ಚಿಮ ಏಷ್ಯಾ ಸಂಘರ್ಷ ತಗ್ಗಿಸುವ ನಿಟ್ಟಿನಲ್ಲಿ ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿ ನಡೆದ ಅಮೆರಿಕ ಮತ್ತು ಇರಾನ್ ನಡುವಿನ 21 ಗಂಟೆಗಳ ಸುದೀರ್ಘ ಮಾತುಕತೆ ಯಾವುದೇ ಒಪ್ಪಂದವಿಲ್ಲದೆ ವಿಫಲವಾಗಿದೆ.

ಅಮೆರಿಕದ ಉಪಾಧ್ಯಕ್ಷ ಜೆ.ಡಿ.ವ್ಯಾನ್ಸ್ ನೇತೃತ್ವದ ನಿಯೋಗವು ಶನಿವಾರದಿಂದ ಭಾನುವಾರ ಬೆಳಗ್ಗೆವರೆಗೆ ನಡೆದ ಈ ಚರ್ಚೆಯಲ್ಲಿ ಭಾಗವಹಿಸಿತ್ತು. ಮಾತುಕತೆ ಮುಗಿದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವ್ಯಾನ್ಸ್, “21 ಗಂಟೆಗಳ ಕಾಲ ನಾವು ಗಂಭೀರ ವಿಷಯಗಳ ಬಗ್ಗೆ ಚರ್ಚಿಸಿದ್ದೇವೆ. ಇದು ಒಳ್ಳೆಯ ವಿಷಯ. ಆದರೆ ನಾವು ಯಾವುದೇ ಒಪ್ಪಂದಕ್ಕೆ ಬರಲು ಸಾಧ್ಯವಾಗಲಿಲ್ಲ” ಎಂದು ಹೇಳಿದರು.

ಇರಾನ್ ನಮ್ಮ ಷರತ್ತುಗಳನ್ನು ಒಪ್ಪಿಕೊಳ್ಳಲಿಲ್ಲ. ಪರಮಾಣು ಶಸ್ತ್ರಾಸ್ತ್ರಗಳ ನಿಯಂತ್ರಣ ಮತ್ತು ಇರಾನ್ ಪರಮಾಣು ಕಾರ್ಯಕ್ರಮವೇ ಈ ಮಾತುಕತೆಯಲ್ಲಿ ಪ್ರಮುಖ ಅಡಚಣೆಯಾಗಿತ್ತು ಎಂದು ತಿಳಿದುಬಂದಿದೆ. “ಇರಾನ್ ಪರಮಾಣು ಶಸ್ತ್ರಾಸ್ತ್ರಗಳನ್ನು ತಯಾರಿಸುವುದಿಲ್ಲ ಎಂಬ ದೃಢ ನಿಲುವನ್ನು ತೋರಿಸಬೇಕು. ಇದು ನಮ್ಮ ರೆಡ್ ಲೈನ್ ಎಂದು ವ್ಯಾನ್ಸ್ ಒತ್ತಿ ಹೇಳಿದರು.

ಇನ್ನೂ “ಅಮೆರಿಕದ ಅತಿಯಾದ ಮತ್ತು ಕಾನೂನುಬಾಹಿರ ಬೇಡಿಕೆಗಳೇ ಮಾತುಕತೆ ವಿಫಲಗೊಳಿಸಿವೆ” ಎಂದು ಇರಾನ್‌ ಆರೋಪಿಸಿದೆ. ಇರಾನ್ ನಿಯೋಗವು ರಾಷ್ಟ್ರೀಯ ಹಿತಗಳನ್ನು ರಕ್ಷಿಸಲು ಪ್ರಯತ್ನಿಸಿದ್ದರೂ ಅಮೆರಿಕದ ಅಸಮಂಜಸ ಬೇಡಿಕೆಗಳಿಂದ ಚರ್ಚೆ ಮುಂದುವರಿಯಲಿಲ್ಲ ಎಂದು ಇರಾನ್‌ನ ಅಧಿಕೃತ ಮೂಲಗಳು ತಿಳಿಸಿವೆ.

ಐತಿಹಾಸಿಕ ಸಂಭಾಷಣೆ
1979ರ ಇಸ್ಲಾಮಿಕ್ ಕ್ರಾಂತಿಯ ನಂತರ ಅಮೆರಿಕ ಮತ್ತು ಇರಾನ್ ನಡುವೆ ನಡೆದ ಮೊದಲ ನೇರ ಉನ್ನತ ಮಟ್ಟದ ಮಾತುಕತೆ ಇದಾಗಿತ್ತು. ಪಾಕಿಸ್ತಾನ ಈ ಸಂಭಾಷಣೆಗೆ ವೇದಿಕೆಯನ್ನು ಒದಗಿಸಿತ್ತು. ಆರ್ಥಿಕ, ಸೈನಿಕ, ಕಾನೂನು ಮತ್ತು ಪರಮಾಣು ವಿಷಯಗಳು ಚರ್ಚೆಯಲ್ಲಿದ್ದವು.

ಮಾತುಕತೆ ವಿಫಲವಾದ ಬಳಿಕ ವ್ಯಾನ್ಸ್ ಪಾಕಿಸ್ತಾನದಿಂದ ನಿರ್ಗಮಿಸಿದ್ದಾರೆ. ಅಮೆರಿಕವು “ಇದು ನಮ್ಮ ಅಂತಿಮ ಮತ್ತು ಉತ್ತಮ ಪ್ರಸ್ತಾಪ” ಎಂದು ಇರಾನ್‌ಗೆ ಹೇಳಿದೆ. ಇರಾನ್ ಇದನ್ನು ಸ್ವೀಕರಿಸುತ್ತದೆಯೇ ಎಂಬುದು ಈಗ ಪ್ರಶ್ನೆಯಾಗಿದೆ. ಮುಂದಿನ ದಿನಗಳಲ್ಲಿ ಮತ್ತೆ ಮಾತುಕತೆ ನಡೆಯುವ ಸಾಧ್ಯತೆ ಬಗ್ಗೆ ಯಾವುದೇ ಸುಳಿವು ಲಭ್ಯವಿಲ್ಲ.

ಈ ಮಾತುಕತೆ ವಿಫಲತೆಯಿಂದ ಪಶ್ಚಿಮ ಏಷ್ಯಾದ ಉದ್ವಿಗ್ನತೆ ಮುಂದುವರಿಯುವ ಸಾಧ್ಯತೆ ಇದೆ ಎಂದು ವರದಿಗಳು ಹೇಳುತ್ತಿವೆ.

Tags:
error: Content is protected !!