Mysore
23
overcast clouds
Light
Dark

ಸಿಂಗಾಪುರದಲ್ಲಿ ಕೋವಿಡ್‌ನ ಹೊಸ ಅಲೆ: ಮಾಸ್ಕ್‌ ಧರಿಸಲು ಸರ್ಕಾರದ ಸಲಹೆ

ಸಿಂಗಾಪುರ: ಸಿಂಗಾಪುರದಲ್ಲಿ ಕೋವಿಡ್-19 ಹೊಸ ಅಲೆ ಕಾಣಿಸಿಕೊಂಡಿದ್ದು, ಒಂದೇ ವಾರದಲ್ಲಿ 25900 ಪ್ರಕರಣಗಳು ಪತ್ತೆಯಾಗಿವೆ. ಆದ್ದರಿಂದ ಎಲ್ಲರೂ ತಪ್ಪದೇ ಮಾಸ್ಕ್‌ ಧರಿಸುವಂತೆ ಶನಿವಾರ(ಮೇ.18) ಆರೋಗ್ಯ ಸಚಿವ ಓಂಗ್‌ ಯೇ ಕುಂಗ್‌ ಜನಸಾಮಾನ್ಯರಿಗೆ ಸಲಹೆ ನೀಡಿದ್ದಾರೆ.

ದೇಶದಲ್ಲಿ ಕೋವಿಡ್‌ ಸೋಂಕಿನ ಅಲೆ ಆರಂಭಿಕ ಹಂತದಲ್ಲಿದ್ದು, ಮುಂದಿನ ದಿನಗಳಲ್ಲಿ ಅಂದರೆ ಜೂನ್‌ ಅಂತ್ಯದ ವೇಳೆಗೆ ಗರಿಷ್ಟ ಮಟ್ಟ ತಲುಪಲಿದೆ ಎಂದು ಆರೋಗ್ಯ ಸಚಿವರು ಎಚ್ಚರಿಕೆ ನೀಡಿದ್ದಾರೆ.

ಮೇ 5 ರಿಂದ ೧೧ ರವರೆಗೆ 25900 ಕೋವಿಡ್‌ ಪ್ರಕರಣ ದಾಖಲಾಗಿದೆ. ಆಸ್ಪತ್ರೆಗೆ ದಾಖಲಾಗವು ದೈನಂದಿನ ಸರಾಸರಿ ೨೫೦ ದಾಟಿದೆ. ಜನತೆ ಆತಂಕ ಪಡುವ ಅಗತ್ಯವಿಲ್ಲ. ಸರ್ಕಾರ ಆಸ್ಪತ್ರೆಗಲ್ಲಿ ಈಗಾಗಲೇ ಬೆಡ್‌ಗಳ ವ್ಯವಸ್ಥೆ ಸೇರಿದಂತೆ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಜನತೆ ಮುನ್ನೆಚ್ಚರಿಕೆ ಕ್ರಮಗಳನ್ನು ಸೂಚಿಸಬೇಕಿದೆ ಎಂದು ಸಿಂಗಪುರ ಸರ್ಕಾರ ಸಲಹೆ ನೀಡಿದೆ.