Mysore
21
overcast clouds
Light
Dark

ಜೂನ್‌.2ರಂದು ತೆಲಂಗಾಣ ರಾಜ್ಯ ರಚನಾ ದಿನ: ಇದೇ ದಿನ ರಾಜ್ಯಕ್ಕೆ ನೂತನ ರಾಜ್ಯಗೀತೆ

ಹೈದರಾಬಾದ್‌: ಖ್ಯಾತ ಕವಿ ಅಂದೇ ಅವರು ಬರೆದಿರುವ “ಜಯ ಜಯ ಹೇ ತೆಲಂಗಾಣ” ಗೀತೆಯನ್ನು ರಾಜ್ಯಗೀತೆಯನ್ನಾಗಿ ಅನುಮೋದಿಸಿ ತೆಲಂಗಾಣ ಸರ್ಕಾರ ಆದೇಶ ಹೊರಡಿಸಿದೆ.

ಜೂನ್‌.2ರಂದು ರಾಜ್ಯ ರಚನಾ ದಿನವಾಗಿದ್ದು, ಈ ಸಂಬಂಧ ಅದ್ಧೂರಿ ಆಚರಣೆ ವೇಳೆ ರಾಜ್ಯಗೀತೆಯನ್ನು ಬಿಡುಗಡೆ ಮಾಡಲಾಗುವುದು ಎಂದು ಗುರುವಾರ ತಡರಾತ್ರಿ ತೆಲಂಗಾಣ ಸರ್ಕಾರ ತನ್ನ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.

20ವರ್ಷಗಳ ಹಿಂದೆ ಅಂದೇ ಶ್ರೀ ಅವರು ಈ ಗೀತೆಯನ್ನು ರಚನೆ ಮಾಡಿದ್ದರು. ಈ ಗೀತೆಯಲ್ಲಿ ಯಾವುದೇ ಬದಲಾವಣೆಯನ್ನು ಸಹಾ ಮಾಡದೇ ರಾಜ್ಯಗೀತೆಯನ್ನಾಗಿ ಸ್ವೀಕರಿಸಲಾಗಿದೆ. ಮತ್ತು ಈ ಹಾಡಿಗೆ ಆಸ್ಕರ್‌ ವಿಜೇತ ಎಂ.ಎಂ ಕೀರವಾಣಿ ಸಂಗೀತ ಸಂಯೋಜನೆ ಮಾಡಿದ್ದಾರೆ ಎಂದು ಹೇಳಿದೆ.

ರಾಜ್ಯಗೀತೆಯನ್ನು ಎರಡು ಆವೃತ್ತಿಗಳಲ್ಲಿ ನಿರ್ಮಿಸಲಾಗಿದೆ. ಮೊದಲ ಆವೃತ್ತಿ ಎರಡೂವರೆ ನಿಮಿಷಗಳ ವರೆಗೆ ಇರುತ್ತದೆ. ಎರಡನೇ ಆವೃತ್ತಿ ಸೇರಿದಂತೆ ಪೂರ್ಣ ಹದಿಮೂರು ನಿಮಿಷಗಳ ವರೆಗೆ ನಿರೂಪಣೆಯಿದೆ. ಮತ್ತು ಮೂರು ಚರಣಗಳನ್ನು ಹೊಂದಿರುವ ಚಿಕ್ಕ ಆವೃತ್ತಿಯನ್ನು ಅಧಿಕೃತ ಕಾರ್ಯಕ್ರಮಗಳಲ್ಲಿ ಪ್ಲೇ ಮಾಡಲಾಗುವುದು. ಎರಡು ಆವೃತ್ತಿಗಳನ್ನು ರಾಜ್ಯ ಗೀತೆಯನ್ನಾಗಿ ಪರಿಗಣಿಸಲಾಗುವುದು ಎಂದು ಸಿಎಂ ರೇವಂತ್‌ ರೆಡ್ಡಿ ಹೇಳಿದ್ದಾರೆ.