ನವದೆಹಲಿ: ನೀಟ್-ಯುಜಿ ಪರೀಕ್ಷಾ ಅವ್ಯವಹಾರಗಳ ಕುರಿತು ತನಿಖೆ ನಡೆಸುತ್ತಿರುವ ಸಿಬಿಐ ಗುಜರಾತ್‌ನ ಗೋಧ್ರಾದಲ್ಲಿರುವ ಜಯಬಲರಾಮ್ ಶಾಲೆಯ ಮುಖ್ಯಸ್ಥ ದೀಕ್ಷಿತ್ ಪಟೇಲ್ ಎಂಬುವರನ್ನು ಬಂಧಿಸಿದೆ.
ಈ ಮೂಲಕ ಪ್ರಕರಣದಲ್ಲಿ ಬಂಧಿತರಾದವರ ಸಂಖ್ಯೆ ಆರಕ್ಕೆ ಏರಿದೆ. ದೀಕ್ಷಿತ್ ಪಟೇಲ್ ಪಂಚಮಹಲ್ ಜಿಲ್ಲೆಯ ಗೋಧ್ರಾ ಬಳಿ ಇರುವ ಜೈ ಬಲರಾಮ್ ಶಾಲೆಯ ಮಾಲೀಕರಾಗಿದ್ದಾರೆ. ಮೇ 5 ರಂದು ನಡೆದ ನೀಟ್-ಯುಜಿ ಪರೀಕ್ಷೆಗೆ ನಿಗದಿಯಾಗಿದ್ದ ಕೇಂದ್ರಗಳ ಪೈಕಿ ಜಯ ಬಲರಾಮ್ ಶಾಲೆಯೂ ಒಂದಾಗಿತ್ತು.
ಪಟೇಲ್ ಅವರನ್ನು ಅವರ ನಿವಾಸದಿಂದ ಬಂಧಿಸಲಾಯಿತು. ಆ ಬಳಿಕ ಅವರನ್ನು ಅಹಮದಾಬಾದ್‌ನ ನ್ಯಾಯಾಲಯಕ್ಕೆ ಹಾಜರು ಪಡಿಸಲಾಯಿತು ಎಂದು ಪಬ್ಲಿಕ್ ಪ್ರಾಸಿಕ್ಯೂಟರ್ ತಿಳಿಸಿದ್ದಾರೆ.
ದೀಕ್ಷಿತ್ ಪಟೇಲ್ ಅವರು ನಿಟ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು 10 ರಿಂದ 27 ಲಕ್ಷದವರೆಗೆ ಪಡೆಯುತ್ತಿದ್ದರು ಎಂಬ ಆರೋಪ ಇದೆ.