ಬಿಹಾರ : ಬಿಹಾರದ 243 ವಿಧಾನಸಭಾ ಕ್ಷೇತ್ರಗಳ ಭವಿಷ್ಯ ಇನ್ನೇನು ಕೆಲವೇ ಕ್ಷಣಗಳಲ್ಲಿ ನಿರ್ಧಾರವಾಗಲಿದೆ. ಮತ ಎಣಿಕೆ ಚಾಲ್ತಿಯಲ್ಲಿದ್ದು, ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಎನ್‌ಡಿಎ ಮೈತ್ರಿಕೂಟವು ಅಧಿಕಾರವನ್ನು ಉಳಿಸಿಕೊಳ್ಳುವ ತವಕದಲ್ಲಿದ್ದರೆ, ತೇಜಸ್ವಿ ಯಾದವ್ ನೇತೃತ್ವದ ಮಹಾಘಟಬಂಧನ್ ಪ್ರಬಲ ಪೈಪೋಟಿ ನೀಡಿದೆ. ರಾಜಕೀಯ ತಂತ್ರಗಾರ ಪ್ರಶಾಂತ್ ಕಿಶೋರ್ ಅವರ ʻಜನ್ ಸುರಾಜ್ʼ ಪಕ್ಷದ ಪ್ರವೇಶವು ಫಲಿತಾಂಶದ ಮೇಲೆ ಯಾವ ರೀತಿ ಪರಿಣಾಮ ಬೀರಲಿದೆ ಎಂಬುದು ತೀವ್ರ ಕುತೂಹಲ ಕೆರಳಿಸಿದೆ.
ಮೆಗಾ ಗೆಲುವಿನತ್ತ ಎನ್‌ಡಿಎ
ಎನ್‌ಡಿಎ ಕಂಡು ಕೇಳರಿಯದ ಗೆಲುವಿನತ್ತ ಮುಖ ಮಾಡಿದ್ದು, 182 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಬಿಜೆಪಿ 81 ಹಾಗೂ ಜೆಡಿಯು 74 ಸ್ಥಾನಗಳಲ್ಲಿ ಮುಂದಿದ್ದು, ಮಹಾಘಟಬಂಧನ್ ಹೀನಾಯ ಸೋಲಿನತ್ತ ಮುಖ ಮಾಡಿದೆ. ಕೇವಲ 57 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದು, ಆರ್‌ಜೆಡಿ 42 ಹಾಗೂ ಕಾಂಗ್ರೆಸ್ ಕೇವಲ 8 ಸ್ಥಾನಗಳಲ್ಲಿ ಮುಂದಿವೆ.
ಇದನ್ನು ಓದಿ : ಬಿಹಾರ | ರಸ್ತೆ ಬದಿ ವಿವಿಪ್ಯಾಟ್ ಚೀಟಿಗಳ ರಾಶಿ ಪತ್ತೆ ; ಅಧಿಕಾರಿ ಅಮಾನತು
ಬಿಜೆಪಿ ಅತಿದೊಡ್ಡ ಪಕ್ಷ
ಸ್ಪರ್ಧಿಸಿದ 101 ಸ್ಥಾನಗಳಲ್ಲಿ ಬಿಜೆಪಿ ಬರೋಬ್ಬರಿ 78ರಲ್ಲಿ ಮುನ್ನಡೆ ಕಾಯ್ದುಕೊಂಡಿದ್ದು, ಭಾರೀ ಗೆಲುವಿನತ್ತ ಮುಖಮಾಡಿದೆ. ಇದೇ ಟ್ರೆಂಡ್ ಮುಂದುವರಿದಲ್ಲಿ, ಬಿಜೆಪಿ ಬಿಹಾರದ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ.
ಭರ್ಜರಿ ಗೆಲುವಿನತ್ತ ಎನ್‌ಡಿಎ
151 ಕ್ಷೇತ್ರಗಳಲ್ಲಿ ಎನ್‌ಡಿಎ ಮುನ್ನಡೆ ಕಾಯ್ದುಕೊಂಡಿದ್ದು, ಭರ್ಜರಿ ಗೆಲುವಿನತ್ತ ದಾಪುಗಾಲಿಟ್ಟಿದೆ. ಎಂಜಿಬಿ ಮುನ್ನಡೆಯಲ್ಲಿ ಇಳಿಕೆಯಾಗಿದ್ದು, 87 ಸ್ಥಾನಗಳಿಗೆ ಕುಸಿದಿದೆ.
ಸೆಂಚುರಿ ಬಾರಿಸಿದ ಮಹಾಘಟಬಂಧನ್
ಮುನ್ನಡೆಯಲ್ಲಿ ಮಹಾಘಟಬಂಧನ್ ಕೂಡ ಸೆಂಚುರಿ ದಾಟಿದೆ. ಒಟ್ಟಾರೆ 102 ಕ್ಷೇತ್ರಗಳಲ್ಲಿ ಎಂಜಿಬಿ ಮುಂದಿದ್ದು, ಆರ್‌ಜೆಡಿ 73 ಹಾಗೂ ಕಾಂಗ್ರೆಸ್ 19 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಆದರೆ ಎನ್‌ಡಿಎ 137 ಕ್ಷೇತ್ರಗಳಲ್ಲಿ ಮುಂದಿದ್ದು, ಮ್ಯಾಜಿಕ್ ಮಾರ್ಕ್ ದಾಟಿದೆ.
ಇದನ್ನು ಓದಿ: ಬಿಹಾರ ಚುನಾವಣೆಯಲ್ಲೂ ವೋಟ್ ಚೋರಿ: ಸಚಿವ ಭೋಸರಾಜು
98 ಸ್ಥಾನಗಳಲ್ಲಿ ಮಹಾಘಟಬಂಧನ್ ಮುನ್ನಡೆ
ಮಹಾಘಟಬಂಧನ್ ಭಾರೀ ಹಿನ್ನಡೆ ಕಂಡುಕೊಂಡಿದೆ. ಕೇವಲ 98 ಕ್ಷೇತ್ರಗಳಲ್ಲಿ ಮೈತ್ರಿಕೂಟದ ಅಭ್ಯರ್ಥಿಗಳು ಮುಂದಿದ್ದಾರೆ. ಆರ್‌ಜೆಡಿ ಗರಿಷ್ಠ 71 ಕ್ಷೇತ್ರಗಳಲ್ಲಿ ಮುಂದಿದ್ದರೆ, ಕಾಂಗ್ರೆಸ್ ಅಭ್ಯರ್ಥಿಗಳು 17 ಕಡೆಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದಾರೆ.
ಮುನ್ನಡೆಯಲ್ಲಿ ಶತಕ ಬಾರಿಸಿದ ಎನ್‌ಡಿಎ
ಆರಂಭಿಕ ಟ್ರೆಂಡ್‌ಗಳಲ್ಲಿ ಎನ್‌ಡಿಎ ಭರ್ಜರಿ ಮುನ್ನಡೆ ಕಾಯ್ದುಕೊಂಡಿದೆ. 111 ಸ್ಥಾನಗಳಲ್ಲಿ ಮೈತ್ರಿಕೂಟದ ಅಭ್ಯರ್ಥಿಗಳು ಮುಂದಿದ್ದು, ಬಿಜೆಪಿ 58, ಜೆಡಿಯು 43 ಸ್ಥಾನಗಳಲ್ಲಿ ಮುನ್ನಡೆಯಲ್ಲಿದೆ.
ಎನ್‌ಡಿಎಗೆ ಭರ್ಜರಿ ಆರಂಭಿಕ ಮುನ್ನಡೆ
ಅಂಚೆ ಮತಗಳ ಎಣಿಕೆ ಆರಂಭವಾಗಿದ್ದು, ಬಿಜೆಪಿ-ಜೆಡಿಯು ನೇತೃತ್ವದ ಎನ್‌ಡಿಎ ಭರ್ಜರಿ ಆರಂಭಿಕ ಮುನ್ನಡೆ ಕಾಯ್ದುಕೊಂಡಿದೆ. ಎನ್‌ಡಿಎ ಒಟ್ಟಾರೆ 47 ಸ್ಥಾನಗಳಲ್ಲಿ ಮುಂದಿದ್ದರೆ, ವಿಪಕ್ಷಗಳ ಒಕ್ಕೂಟ ಮಹಾಘಟಬಂಧನ್ ಅಭ್ಯರ್ಥಿಗಳು 30 ಸ್ಥಾನಗಳಲ್ಲಿ ಮುನ್ನಡೆ ಕಂಡುಕೊಂಡಿದ್ದಾರೆ. ಇತರರು ನಾಲ್ಕು ಸ್ಥಾನಗಳಲ್ಲಿ ಮುಂದಿದ್ದಾರೆ.





