Mysore
23
overcast clouds
Light
Dark

ಕೇರಳ ಪೊಲೀಸರಿಗೆ ಶರಣಾದ ಕರ್ನಾಟಕದ ನಕ್ಸಲ್‌ ಸುರೇಶ್‌

ಕೇರಳ: ಕಾಡಾನೆ ದಾಳಿಯಿಂದ ಗಾಯಗೊಂಡಿದ್ದ ಕರ್ನಾಟಕದ ಚಿಕ್ಕಮಗಳೂರಿನ ಮೂಡಿಗೆರೆ ತಾಲೂಕಿನ ಅಂಗಡಿ ಗ್ರಾಮದ ನಕ್ಸಲ್‌ ಸುರೇಶ್‌ ಅಲಿಯಾಸ್‌ ಪ್ರದೀಪ್‌ ಭಾನುವಾರ ಕೇರಳದ ಕಣ್ಣೂರಿನಲ್ಲಿ ಪೊಲೀಸರಿಗೆ ಶರಣಾಗಿದ್ದಾನೆ.

ಇತ್ತೀಚೆಗೆ ಕೇರಳ-ಕರ್ನಾಟಕ ಗಡಿಯ ಅರಣ್ಯ ಪ್ರದೇಶದಲ್ಲಿ ನಕ್ಸಲೀಯರ ತಂಡದೊಂದಿಗೆ ಸಂಚರಿಸುತ್ತಿದ್ದಾಗ ಸುರೇಶ್ ಕಾಡಾನೆ ದಾಳಿಗೆ ತುತ್ತಾಗಿದ್ದರು. ಗಂಭೀರ ಗಾಯಗೊಂಡಿದ್ದ ಅವರನ್ನು ಆರು ಜನರಿದ್ದ ನಕ್ಸಲೀಯರ ತಂಡ ಗಡಿಭಾಗದ ಕಂಜಿರಕೊಲ್ಲಿ ಚಿತ್ತಾರಿ ಕಾಲನಿಯಲ್ಲಿ ಬಿಟ್ಟು ಹೋಗಿತ್ತು. ಬಳಿಕ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿ ಸುರೇಶ್ನನ್ನು ಕಣ್ಣೂರಿನ ಆಸ್ಪತ್ರೆಯೊಂದಕ್ಕೆ ದಾಖಲಿಸಿದ್ದರು.

ಸುರೇಶ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಚೇತರಿಸಿಕೊಂಡ ಬಳಿಕ ಪೊಲೀಸರಿಗೆ ಶರಣಾಗುವ ಸಂದರ್ಭ ಗಾಲಿ ಖುರ್ಚಿಯಲ್ಲಿ ಕುಳಿತು ಮಾಧ್ಯಮದವರೊಂದಿಗೆ ಮಾತನಾಡಿ, ತಾನು ಬಹು ಕಾಲದ ಹಿಂದೆಯೇ ಶರಣಾಗಲು ಬಯಸಿದ್ದೆ. ನಾನು ಕಳೆದ 23 ವರ್ಷಗಳಿಂದ ಮಾವೋವಾದಿಯಾಗಿದ್ದೆ, ಈಗ ಶರಣಾಗುತ್ತಿದ್ದೇನೆ. ಮಾವೋವಾದಿಯಾದ ಬಳಿಕವೂ ನನಗೆ ಏನೂ ಮಾಡಲು ಸಾಧ್ಯವಾಗಲಿಲ್ಲ. ಹಲವು ವರ್ಷಗಳ ಬಳಿಕವೂ ನಮಗೆ ಕೇರಳ, ತಮಿಳುನಾಡು ಅಥವಾ ಕರ್ನಾಟಕದಲ್ಲಿ ಯಾವುದೇ ಬದಲಾವಣೆ ತರಲು ಸಾಧ್ಯವಾಗಲಿಲ್ಲ ಎಂದು ಹೇಳಿದ್ದಾರೆ.