ನವದೆಹಲಿ: ಹಣ ಹಾಗೂ ಚಿನ್ನ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತವಾಗಿರುವ ಐಶ್ವರ್ಯ ಗೌಡರನ್ನು ಹೆಚ್ಚಿನ ವಿಚಾರಣೆಗಾಗಿ 14 ದಿನ ಜಾರಿ ನಿರ್ದೇಶನಾಲಯದ ವಶಕ್ಕೆ ನೀಡಿ ಕೋರ್ಟ್ ಆದೇಶ ನೀಡಿದೆ.
ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ಐಶ್ವರ್ಯ ಗೌಡರನ್ನು ಏಪ್ರಿಲ್.24ರಂದು ವಶಕ್ಕೆ ತೆಗೆದುಕೊಳ್ಳಲಾಗಿತ್ತು ಹಾಗೂ ಪಿಎಂಎಲ್‌ಎ ವಿಶೇಷ ನ್ಯಾಯಾಲಯವು ಐಶ್ವರ್ಯ ಗೌಡರನ್ನು 14 ದಿನಗಳ ಕಾಲ ಇಡಿ ಕಸ್ಟಡಿಗೆ ನೀಡಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಐಶ್ವರ್ಯ ಗೌಡ ಅವರ ಹಲವು ನಿವಾಸಗಳ ಮೇಲೆ ಏಪ್ರಿಲ್ 24 ಹಾಗೂ 25ರಂದು ಇಡಿ ದಾಳಿ ನಡೆಸಿತ್ತು. ದಾಳಿ ವೇಳೆ ಆರೋಪಿ ಐಶ್ವರ್ಯಾ ಗೌಡ ಮನೆಯಲ್ಲಿ ಸುಮಾರು 2.25 ಕೋಟಿ ರೂ ನಗದು ದೊರೆತಿದ್ದು, ಈ ಬಗ್ಗೆ ಪ್ರಶ್ನಿಸಿದ್ದಕ್ಕೆ ಸೂಕ್ತ ಉತ್ತರ ನೀಡದ ಕಾರಣ ಅವರನ್ನು ಬಂಧಿಸಲಾಗಿದೆ.





