Mysore
32
few clouds

Social Media

ಶುಕ್ರವಾರ, 24 ಏಪ್ರಿಲ 2026
Light
Dark

ಟ್ರಂಪ್‌ ಹೇಳಿದ್ದನ್ನು ಪಾಲಿಸಲು ಮೋದಿ ಇಸ್ರೇಲ್‌ಗೆ ಭೇಟಿ ನೀಡಿದ್ದರು: ರಾಹುಲ್‌ ಗಾಂಧಿ

Narendra modi and rahul gandhi

ಚೆನ್ನೈ: ಇರಾನ್-ಇಸ್ರೇಲ್‌ ಯುದ್ಧ ಶುರುವಾಗುವ ಮೊದಲು ಅಮೇರಿಕಾ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೇಳಿದ್ದನ್ನು ಪಾಲಿಸುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ ಇಸ್ರೇಲ್‌ಗೆ ಭೇಟಿ ನೀಡಿದ್ದರು ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಲೇವಡಿ ಮಾಡಿದ್ದಾರೆ.

ತಮಿಳುನಾಡಿನಲ್ಲಿ ಚುನಾವಣಾ ಸಮಾವೇಶದಲ್ಲಿ ಮಾತನಾಡಿದ ಅವರು, ಟ್ರಂಪ್‌ ಹೇಳಿದಂತೆ ಪ್ರಧಾನಿ ಮೋದಿ ಕೇಳುತ್ತಾರೆ. ಆದ್ದರಿಂದಲೇ ಯುದ್ಧ ಶುರುವಾಗುವ ಮೊದಲು ಪ್ರಧಾನಿ ಮೋದಿ ಅವರು ಟ್ರಂಪ್‌ ಮಾತು ಕೇಳಿಕೊಂಡು ಇಸ್ರೇಲ್‌ಗೆ ಭೇಟಿ ನೀಡಿದ್ದರು ಎಂದು ಗಂಭೀರ ಆರೋಪ ಮಾಡಿದರು.

ಡೊನಾಲ್ಡ್‌ ಟ್ರಂಪ್‌ ಹೇಳುವುದನ್ನೆಲ್ಲಾ ಕೇಳುತ್ತಿರುವ ಮೋದಿ ನಡವಳಿಕೆಗೆ ಇರುವ ಕಾರಣವೆಂದರೆ ಅದು ಎಪ್ಸ್ಟೀನ್‌ ಫೈಲ್ಸ್‌ ಮತ್ತು ಅದಾನಿ ಎಂದು ರಾಹುಲ್‌ ಗಾಂಧಿ ಕುಟುಕಿದರು.

Tags:
error: Content is protected !!