Ashburn
31
scattered clouds
Light
Dark

ವಾರಣಾಸಿಯಲ್ಲಿ ಮೋದಿ ರೋಡ್‌ ಶೋ; ಬಳಿಕ ಕಾಶಿ ವಿಶ್ವನಾಥ ದೇವಾಲಯದಲ್ಲಿ ವಿಶೇಷ ಪೂಜೆ

ವಾರಣಾಸಿ: ಪ್ರಧಾನಿ ನರೇಂದ್ರ ಮೋದಿ ವಾರಣಾಸಿಯಿಂದ ನಾಮಪತ್ರ ಸಲ್ಲಿಸಲು ಸಿದ್ಧತೆ ನಡೆಸಿದ್ದು, ನಾಳೆ(ಮೇ.೧೪) ನಾಮಪತ್ರ ಸಲ್ಲಿಸಲಿದ್ದಾರೆ. ವಾರಾಣಸಿಯಿಂದ ಮೂರನೇ ಅವಧಿಯ ಆಯ್ಕೆ ಬಯಸಿ ಸ್ಪರ್ಧಿಸಲಿದ್ದಾರೆ.

ಈ ಹಿನ್ನಲೆ ಇಂದು (ಮೇ.೧೩) ವಾರಾಣಸಿಯಲ್ಲಿ ಬೃಹತ್‌ ರೋಡ್‌ ಶೋ ನಡೆಸಿದ್ದಾರೆ. ರಸ್ತೆಯ ಬದಿ ನೆರೆದಿದ್ದ ಸಾವಿರಾರು ಜನರು ಆರತಿ, ಜೈಕಾರಗಳೊಂದಿಗೆ ಮೋದಿಯನ್ನು ಸ್ವಾಗತಿಸಿದ್ದಾರೆ.

ಬಳಿಕ ಕಾಶಿ ವಿಶ್ವನಾಥನ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.